ADVERTISEMENT

ತೀರ್ಥಹಳ್ಳಿ | ಒಂದೂವರೆ ಕೆ.ಜಿ. ಚಿನ್ನ ಜಪ್ತಿ ಮಾಡಿದ ಮಾಗಡಿ ಪೊಲೀಸರು

ಆರೋಪಿ ಹಮ್ಜಾ ವಿರುದ್ಧ 80ಕ್ಕೂ ಹೆಚ್ಚು ಅಪರಾಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 16:09 IST
Last Updated 19 ಅಕ್ಟೋಬರ್ 2024, 16:09 IST
<div class="paragraphs"><p>ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)</p></div>

ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)

   

ತೀರ್ಥಹಳ್ಳಿ (ಶಿವಮೊಗ್ಗ): ಬೆಂಗಳೂರು ಸಮೀಪದ ಮಾಗಡಿ ಠಾಣೆ ಪೊಲೀಸರು, ಕಳವು ಪ್ರಕರಣದ ಆರೋಪಿಯೊಬ್ಬ ನೀಡಿದ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಿ, ಇಲ್ಲಿನ ಬೆಟ್ಟಮಕ್ಕಿಯ ಮನೆಯೊಂದರಲ್ಲಿ ಹೂತಿಟ್ಟಿದ್ದ ಅಂದಾಜು ಒಂದೂವರೆ ಕೆ.ಜಿ. ಚಿನ್ನವನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ.  

ಮಾಗಡಿ ತಾಲ್ಲೂಕಿನಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕರಣದ ಆರೋಪಿ, ಗುಡ್ಡೇಕೇರಿಯ ಅಮೀರ್‌ ಹಮ್ಜಾ (40) ಎಂಬಾತನನ್ನು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕರೆದೊಯ್ದು, ಆತ ಬೆಟ್ಟಮಕ್ಕಿಯಲ್ಲಿ ಹೂತಿಟ್ಟಿದ್ದ ಚಿನ್ನ ಜಪ್ತಿ ಮಾಡಿದ್ದಾರೆ. 

ADVERTISEMENT

ಅಮೀರ್‌ ಹಮ್ಜಾ ಹತ್ತಾರು ಹೆಸರಿನಿಂದ ಗುರುತಿಸಿಕೊಂಡಿದ್ದು, ಈತನ ವಿರುದ್ಧ 80ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ. ಕಮ್ಮರಡಿಯಲ್ಲಿ ನಡೆದ ಹೊಸಹಳ್ಳಿ ವೆಂಕಟೇಶ್‌ ಕೊಲೆ ಸೇರಿ ವಿವಿಧ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.