ADVERTISEMENT

ಭದ್ರಾವತಿ | ಕಾಡುಕೋಣ ಹತ್ಯೆ ಪ್ರಕರಣ: ತಲೆಮೆರೆಸಿಕೊಂಡಿದ್ದವರ ಸೆರೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:19 IST
Last Updated 23 ಅಕ್ಟೋಬರ್ 2024, 15:19 IST
ಭದ್ರಾವತಿ ನಗರದ ಅರಣ್ಯ ವಿಭಾಗ ಕಾರ್ಯಾಚರಣೆ ನಡೆಸಿ ಕಾಡುಕೋಣ ಹತ್ಯೆ ಆರೋಪಿಗಳನ್ನು ಬಂಧಿಸಿರುವುದು
ಭದ್ರಾವತಿ ನಗರದ ಅರಣ್ಯ ವಿಭಾಗ ಕಾರ್ಯಾಚರಣೆ ನಡೆಸಿ ಕಾಡುಕೋಣ ಹತ್ಯೆ ಆರೋಪಿಗಳನ್ನು ಬಂಧಿಸಿರುವುದು   

ಭದ್ರಾವತಿ: ಕಾಡುಕೋಣ ಹತ್ಯೆ ಮಾಡಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಇಲ್ಲಿನ ಅರಣ್ಯ ವಿಭಾಗದ ತಂಡ ಯಶಸ್ವಿಯಾಗಿದೆ.

ತಾಲ್ಲೂಕಿನ ಶ್ರೀನಿವಾಸಪುರ ನಿವಾಸಿ ಶಿವರಾಮ ಮತ್ತು ಉಕ್ಕುಂದ ಗ್ರಾಮದ ನಿವಾಸಿ ರಂಗಸ್ವಾಮಿ ಸೇರಿದಂತೆ ಮೂರು ಜನರ ವಿರುದ್ಧ ಅ.17ರಂದು ಪ್ರಕರಣ ದಾಖಲಾಗಿತ್ತು. ಈ ಪೈಕಿ ಶಿವರಾಮ ಮತ್ತು ರಂಗಸ್ವಾಮಿ ತಲೆಮರೆಸಿಕೊಂಡಿದ್ದರು. ವಲಯ ಅರಣ್ಯ ಅಧಿಕಾರಿ ಬಿ.ಎಚ್. ದುಗ್ಗಪ್ಪ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಉಪವಲಯ ಅರಣ್ಯ ಅಧಿಕಾರಿಗಳಾದ ಅಣ್ಣನಾಯಕ್, ಕೃಷ್ಣ ರೆಡ್ಡಿ, ಶೇಖರ್ ಚೌಗುಲೆ, ಹನುಮಂತ ನಾಯಕ್, ಸಿಬ್ಬಂದಿ ಹನುಮಂತರಾಯ, ಗಸ್ತು ಅರಣ್ಯಪಾಲಕರಾದ ಎಸ್. ಕಾಂತೇಶ್ ನಾಯಕ್, ವಿನೋದ್ ಬಿರಾದರ್, ಬಾಲರಾಜ್, ಪಿ. ನಾಗೇಂದ್ರ. ಸಿ.ಚಂದ್ರಶೇಖರ್ ಹಾಗೂ ಅರಣ್ಯ ವೀಕ್ಷಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.