ಶಿವಮೊಗ್ಗ: ಆಕಾಶವಾಣಿ ಭದ್ರಾವತಿ (FM103.5 ಹಾಗೂ MW675Khz) ನವೆಂಬರ್ ತಿಂಗಳ ಪೂರ್ತಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹೊರನಾಡ ಕನ್ನಡಿಗರ ಅನಿಸಿಕೆ ಧ್ವನಿಮುದ್ರಿಸಿ ಅವರಿಗಿರುವ ಕನ್ನಡದ ಪ್ರೀತಿ ಕುರಿತು ‘ಹೊರನಾಡ ಕನ್ನಡಿಗರ ಕನ್ನಡ ಪ್ರೀತಿ’ ಸರಣಿ ಕಾರ್ಯಕ್ರಮ ಪ್ರಸಾರ ಮಾಡಲಿದೆ.
ಪ್ರತಿ ದಿನ ಬೆಳಿಗ್ಗೆ 9.35ಕ್ಕೆ ಪ್ರಸಾರವಾಗುವ ಈ ಸರಣಿಯಲ್ಲಿ ಹೊರನಾಡ ಕನ್ನಡಿಗರು ಭಾಗವಹಿಸಲು ಅವಕಾಶವಿದೆ. ಹೊರನಾಡ ಕನ್ನಡಿಗರು ತಮ್ಮ ಕನ್ನಡ ಪ್ರೀತಿಯನ್ನು ಧ್ವನಿಮುದ್ರಿಸಿ airbdvt@gmail.com ಗೆ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮದ ಜತೆ ನವೆಂಬರ್ 1ರಂದು ಬೆಳಿಗ್ಗೆ ಆಕಾಶವಾಣಿ ಹಾಗೂ ಶಿವಮೊಗ್ಗದ ಕರ್ನಾಟಕ ಸಂಘದ ಸಹಯೋಗದಲ್ಲಿ ಶ್ರೋತೃಗಳ ಸಮ್ಮುಖದಲ್ಲಿ ನಡೆದ ’ಕವಿಕಾವ್ಯ ಗಾನಸುಧೆ‘ ವಿಶೇಷ ಕಾರ್ಯಕ್ರಮ ಬೆಳಿಗ್ಗೆ 9ರಿಂದ 11ರವರೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಹೆಸರಾಂತ 10 ಕವಿಗಳು ತಮ್ಮ ಕವನ ವಾಚನ ಹಾಗೂ ಸಂಗೀತ ಸಂಯೋಜಿಸಿ ಭಾವಗೀತೆ ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮ 2 ಗಂಟೆಗಳ ಕಾಲ ಪ್ರಸಾರವಾಗಲಿದೆ.
ಈ ಕಾರ್ಯಕ್ರಮ ಭದ್ರಾವತಿ ಆಕಾಶವಾಣಿ FM103.5 ಹಾಗೂ MW675Khz ನಲ್ಲಿ ಹಾಗೂ
ವಿಶ್ವದಾದ್ಯಂತ Prasarbharati ‘newsonair’ App ನಲ್ಲಿ ಭದ್ರಾವತಿ ಕೇಂದ್ರದ ಮೂಲಕ ಪ್ರಸಾರ ಸಮಯದಲ್ಲಿ ಕೇಳಬಹುದು ಹಾಗೂ ಪ್ರಸಾರದ ನಂತರ Akashavani Bhadravathi youtube channel ನಲ್ಲಿ ಕೇಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.