ADVERTISEMENT

ಲಿಂಗನಮಕ್ಕಿ ಜಲಾಶಯ: ಒಳಹರಿವು 69 ಸಾವಿರ ಕ್ಯುಸೆಕ್‌ಗೆ ಏರಿಕೆ

ಚಕ್ರಾ ಜಲಾಶಯದಿಂದಲೂ ಲಿಂಗನಮಕ್ಕಿಗೆ 1500 ಕ್ಯುಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 4:00 IST
Last Updated 18 ಜುಲೈ 2024, 4:00 IST
<div class="paragraphs"><p>ಲಿಂಗನಮಕ್ಕಿ ಜಲಾಶಯ</p></div>

ಲಿಂಗನಮಕ್ಕಿ ಜಲಾಶಯ

   

(ಸಂಗ್ರಹ ಚಿತ್ರ)

ಶಿವಮೊಗ್ಗ: ಹೊಸನಗರ ತಾಲ್ಲೂಕಿನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಶರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ.

ADVERTISEMENT

ಲಿಂಗನಮಕ್ಕಿ ಜಲಾಶಯಕ್ಕೆ ಗುರುವಾರ ಬೆಳಿಗ್ಗೆ 6 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 69,226 ಕ್ಯುಸೆಕ್ ನೀರು ಹರಿದುಬಂದಿದೆ. ಬುಧವಾರ ಬೆಳಿಗ್ಗೆ ಆ ಪ್ರಮಾಣ 52,355 ಕ್ಯುಸೆಕ್ ಇತ್ತು. 1819 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1787.80 ಅಡಿ ನೀರು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 1757.30 ಅಡಿ ನೀರು ಸಂಗ್ರಹ ಇತ್ತು.

ಕಳೆದ 24 ಗಂಟೆಗಳಲ್ಲಿ ಶರಾವತಿ ಜಲಾನಯನ ಪ್ರದೇಶದ ಹೊಸನಗರ ತಾಲ್ಲೂಕಿನ ಚಕ್ರಾದಲ್ಲಿ ಅತಿಹೆಚ್ಚು 21 ಸೆಂ.ಮೀ ಮಳೆಯಾಗಿದೆ. ಮಾಸ್ತಿಕಟ್ಟೆ 16.5, ಹುಲಿಕಲ್ 15.8, ಯಡೂರು 12.4 ಹಾಗೂ ಮಾಣಿಯಲ್ಲಿ 11 ಸೆಂ.ಮೀ ಮಳೆ ದಾಖಲಾಗಿದೆ.

ಚಕ್ರಾದಿಂದ ಲಿಂಗನಮಕ್ಕಿಗೆ ನೀರು ಬಿಡುಗಡೆ:

ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಚಕ್ರಾ ಜಲಾಶಯದಿಂದ ಚಾನಲ್ ಮೂಲಕ ಲಿಂಗನಮಕ್ಕಿ ಜಲಾಶಯಕ್ಕೆ 1500 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.

ಲಿಂಗನಮಕ್ಕಿಯ ಪೂರಕ ಜಲಾಶಯ ಚಕ್ರಾಗೆ ಗುರುವಾರ ಬೆಳಿಗ್ಗೆ 5386 ಕ್ಯುಸೆಕ್ ಒಳಹರಿವು ಇದೆ. 580.57 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 576.62 ಅಡಿ ನೀರಿನ ಸಂಗ್ರಹ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.