ADVERTISEMENT

ಕೋಣಂದೂರು: ರಾಷ್ಟ್ರೀಯ ವಸತಿ ಶಾಲೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:24 IST
Last Updated 11 ಜುಲೈ 2024, 14:24 IST
ಈಚೆಗೆ ನಡೆದ ಪ್ರಾಂತೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಕೋಣಂದೂರಿನ ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಸಿಬ್ಬಂದಿ ಅಭಿನಂದಿಸಿದರು
ಈಚೆಗೆ ನಡೆದ ಪ್ರಾಂತೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಕೋಣಂದೂರಿನ ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಸಿಬ್ಬಂದಿ ಅಭಿನಂದಿಸಿದರು   

ಕೋಣಂದೂರು: ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಜುಲೈ 8 ಮತ್ತು 9ರಂದು ಬೆಂಗಳೂರಿನ ಕ್ರೈಸ್ಟ್ ಶಾಲೆಯಲ್ಲಿ ಸಿಐಎಸ್‌ಸಿ ಸ್ಪೋರ್ಟ್ಸ್ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪ್ರಾಂತೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. 

25 ಕೆ.ಜಿ ವಿಭಾಗದಲ್ಲಿ 7ನೇ ತರಗತಿ ಮಹಮದ್ ತಬ್ಜಲ್ ದ್ವಿತೀಯ ಸ್ಥಾನ, 25-30 ಕೆ.ಜಿ. ವಿಭಾಗದಲ್ಲಿ 8ನೇ ತರಗತಿ ಎಚ್.ಎಂ.ಗುರುಪ್ರಸಾದ್ ದ್ವಿತೀಯ ಸ್ಥಾನ, 30-34 ಕೆ.ಜಿ.ವಿಭಾಗದಲ್ಲಿ 7ನೇ ತರಗತಿ ಎಚ್.ಎಂ.ಯೋಗಿನಿ ದ್ವಿತೀಯ ಸ್ಥಾನ, 56-60 ಕೆ.ಜಿ.ವಿಭಾಗದಲ್ಲಿ 9ನೇ ತರಗತಿಯ ಮಾನ್ವಿ ಶೆಟ್ಟಿ ತೃತೀಯ ಸ್ಥಾನ, 22-26 ಕೆ.ಜಿ.ವಿಭಾಗದಲ್ಲಿ 7ನೇ ತರಗತಿ ಯು.ನಮಿತಾ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.