ADVERTISEMENT

ಶಿವಮೊಗ್ಗ: ಕೃಷಿ ಮೇಳದಲ್ಲೂ ‘ಡ್ರೋಣ್‌’ ಸದ್ದು, ಗಮನ ಸೆಳೆದ ಗೀರ್‌ ತಳಿ ಹೋರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 16:30 IST
Last Updated 19 ಅಕ್ಟೋಬರ್ 2024, 16:30 IST
ತೋಟಗಾರಿಕೆ ಮೇಳದಲ್ಲಿ ಗುಜರಾತ್‌ ಮೂಲದ ಗೀರ್‌ ತಳಿಯ ಹೋರಿ 
ತೋಟಗಾರಿಕೆ ಮೇಳದಲ್ಲಿ ಗುಜರಾತ್‌ ಮೂಲದ ಗೀರ್‌ ತಳಿಯ ಹೋರಿ    

ಶಿವಮೊಗ್ಗ: ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವ ಡ್ರೋಣ್‌ ಕೃಷಿ ಮೇಳದಲ್ಲಿ ಬೆಳೆಗಾರರ ಗಮನ ಸೆಳೆಯುತ್ತಿದೆ. ನೂರಾರು ಸಂಖ್ಯೆಯ ರೈತರು ಅದರ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿರುವುದು ಶನಿವಾರ ಕಂಡುಬಂದಿತು.

ಅಡಿಕೆಗೆ ಹಿಂಗಾರ ರೋಗ, ಎಲೆ ಚುಕ್ಕಿ ರೋಗ, ಹಳದಿ ರೋಗ ಮತ್ತು ಕೊಳೆ ರೋಗ ಹಾಗೂ ಮಂಗನಿಂದ ಬೆಳೆ ಹಾನಿ ತಡೆಗಟ್ಟಲು ಡ್ರೋಣ್‌ ಬಳಸಿ ತೋಟಕ್ಕೆ ಔಷಧಿ ಸಿಂಪಡಿಸಬಹುದು.  ಇದಲ್ಲದೇ ಯಾವ ಭಾಗದಲ್ಲಿ ಹೆಚ್ಚು ರೋಗ ಬಾಧಿಸಿದೆ ಎಂಬುದನ್ನು ನಿಖರವಾಗಿ ಗುರುತಿಸಿ ಫೋಟೊ ತೆಗೆಯುವ ತಾಂತ್ರಿಕತೆ ಡ್ರೋಣ್‌ ಒಳಗೊಂಡಿದೆ.

9 ಅಡಿ ಉದ್ಧವಿರುವ 20 ಲೀಟರ್‌ ಔಷಧಿ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ಡ್ರೋಣ್‌  ಹೆಚ್ಚು ಗಾಳಿ ಬೀಸುವ ವೇಳೆಯೂ ಅಡಿಕೆ ಮರಗಳ ಮೇಲೆ ಸರಿಯಾಗಿ ಔಷಧಿ ಸಿಂಪಡಿಸುತ್ತದೆ. ಮರಗಳ ಎತ್ತರಕ್ಕೆ ಅನುಗುಣವಾಗಿ ಮೇಲೆ ಕೆಳಗೆ ಹಾರಾಡಿ ಔಷಧಿ ಸಿಂಪಡಿಸುವ ಅಟೋಮ್ಯಾಟಿಕ್‌ ಸೆನ್ಸರ್‌ ಟೆಕ್ನಾಲಜಿ ಒಳಗೊಂಡಿದೆ. ಜಿಪಿಎಸ್‌ ಮೂಲಕ ಅಗತ್ಯ ಇರುವ ಜಾಗಕ್ಕೆ ಮಾತ್ರ ಔಷಧಿ ಸಿಂಪಡಿಸಲಿದೆ. 

ADVERTISEMENT

ಗಿರ್‌ ತಳಿ ಹೋರಿ, ಮೇಕೆಗಳು: 

ಮೇಳದಲ್ಲಿ ಗುಜರಾತ್‌ ಮೂಲದ ತಳಿ ಗೀರ್ ತಳಿಯ ಹೋರಿ ಗಮನ ಸೆಳೆಯುತ್ತಿದೆ. ಕೆಲವರು ಅದರ ಮುಂದೆ ನಿಂತುಕೊಂಡು ಸೆಲ್ಫಿ ತೆಗೆದುಕೊಂಡರು.

ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಸಾಕಣೆ ಮಾಡುವ ಬೋಯರ್‌ ಹಾಗೂ ತಲಚೇರಿ ತಳಿಯ ಮೇಕೆಗಳು ಕೂಡ ಗಮನ ಸೆಳೆಯುತ್ತಿವೆ. ಈ ಮೇಕೆಗಳ ಬೆಲೆ ₹8 ರಿಂದ ₹10 ಸಾವಿರ ಇದೆ.

ಬೋಯರ್‌ ಮೇಕೆ
ಶಿವಮೊಗ್ಗದ ಕೃಷಿ ಮೇಳದಲ್ಲಿ ರೈತರ ಗಮನ ಸೆಳೆದ ಡ್ರೋಣ್
ಕೃಷಿ ಮೇಳದಲ್ಲಿ ಬೆಳೆಗಾರರ ಗಮನ ಸೆಳೆದ ಹೂವಿನ ಬೆಳೆಯ ಪ್ರಾಯೋಗಿಕ ತಾಕುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.