ADVERTISEMENT

ಕುಂಸಿ‌ ಗ್ರಾ.ಪಂ: ಕೆ.ಆರ್.ಗುರುಮೂರ್ತಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 13:53 IST
Last Updated 25 ಜುಲೈ 2024, 13:53 IST
ಕೆ.ಆರ್.ಗುರುಮೂರ್ತಿ
ಕೆ.ಆರ್.ಗುರುಮೂರ್ತಿ   

ಕುಂಸಿ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಕೆ.ಆರ್. ಗುರುಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಕೆ.ಪಿ ಶಾರದಾ ರಂಗನಾಥ್ ಆಯ್ಕೆಯಾದರು.

ಪಿಡಿಒ ಲತಾ, ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು, ಗ್ರಾಮಸ್ಥರು ಅಭಿನಂದಿಸಿದರು.ಚುನಾವಣಾ ಅಧಿಕಾರಿಯಾಗಿ ಗಂಗಾಬಾಯಿ.ಸಿ ಕಾರ್ಯನಿರ್ವಹಿಸಿದರು. 

ಸಮೀಪದ ಕೋಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಅಧ್ಯಕ್ಷ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಸುಕನ್ಯಮ್ಮ ಆಯ್ಕೆಯಾದರು. ಇವರಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮು ಹಾಗೂ ಎಲ್ಲಾ ಸದಸ್ಯರು ಮತ್ತು ಮುಖಂಡರು ಅಭಿನಂದಿಸಿದರು.

ADVERTISEMENT
ಕೆ.ಪಿ.ಶಾರದಾ ರಂಗನಾಥ್
ಸುಕನ್ಯಮ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.