ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಲಿನ ಸ್ನಾತಕೊತ್ತರ ಪದವಿ/ ಸ್ನಾತಕೊತ್ತರ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿಗೆ ಯು.ಯು.ಸಿ.ಎಂ.ಎಸ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನವಾಗಿತ್ತು. ಆದರೆ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ನ. 5ರವರೆಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿದಾರರು ನ.6ರ ಒಳಗೆ ಹಾರ್ಡ್ ಕಾಪಿಯನ್ನು ಸಂಬಂಧಪಟ್ಟ ವಿಭಾಗಕ್ಕೆ ಕಡ್ಡಾಯವಾಗಿ ನೀಡಬೇಕು. ಅರ್ಜಿ ಶುಲ್ಕ ಸಾಮಾನ್ಯ ಮತ್ತು ಒ.ಬಿ.ಸಿ ವರ್ಗದ ಅಭ್ಯರ್ಥಿಗಳಿಗೆ ₹350 ಹಾಗೂ ಎಸ್.ಸಿ/ಎಸ್.ಟಿ/ ಪ್ರವರ್ಗ- 1ರ ವಿದ್ಯಾರ್ಥಿಗಳಿಗೆ ₹175 ನಿಗದಿಪಡಿಸಲಾಗಿದೆ.
ಹಣವನ್ನು ಹಣಕಾಸು ಅಧಿಕಾರಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ ಪದನಾಮದಲ್ಲಿ ಚಲನ್ ಮೂಲಕ ಖಾತೆ ಸಂಖ್ಯೆ 54023036291 ಐಎಫ್‌ಎಸ್‌ಸಿ ಕೋಡ್ SBIN0040759 ಗೆ ಜಮಾ ಮಾಡಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಕುಲ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.