ADVERTISEMENT

ಮಂಗನಕಾಯಿಲೆ: 31 ಪ್ರದೇಶಗಳಲ್ಲಿ ಅರಣ್ಯ ಪ್ರವೇಶ ನಿಷಿದ್ಧ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 13:12 IST
Last Updated 8 ಏಪ್ರಿಲ್ 2020, 13:12 IST

ಶಿವಮೊಗ್ಗ: ಮಂಗನ ಕಾಯಿಲೆ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಜಿಲ್ಲೆಯ ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳ 31 ಪ್ರದೇಶಗಳನ್ನು ಅತಿಸೂಕ್ಷ್ಮಎಂದು ಜಿಲ್ಲಾಡಳಿತಘೋಷಿಸಿದ್ದು,ಆ ಗ್ರಾಮಗಳ ಜನರು ಅರಣ್ಯ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.

ಅರಣ್ಯ ಪ್ರದೇಶದಿಂದಗೊಬ್ಬರಕ್ಕಾಗಿ ಒಣ ಎಲೆಗಳನ್ನು ತಂದಿರುವಗ್ರಾಮಗಳ ಜನರಿಗೇ ಕೆಎಫ್‍ಡಿ ಹರಡಿರುವುದು ಪರೀಕ್ಷೆಗಳಿಂದ ಖಚಿತವಾಗಿದೆ.

ಈ ಪ್ರದೇಶಗಳಲ್ಲಿ ವಾಸಿಸುವ 4,570 ಜನರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 139 ಜನರಲ್ಲಿ ಕೆಎಫ್‌ಡಿ ಇರುವುದು ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ. ಹಾಗಾಗಿ, ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ, ಬೆಟ್ಟಬಸರವಾನಿ, ಕನ್ನಂಗಿ, ಕೋಣಂದೂರು, ಸಾಗರ ತಾಲ್ಲೂಕು ಅರಳಗೋಡು, ಕಾರ್ಗಲ್, ತುಮರಿ ಭಾಗದ ಅರಣ್ಯದೊಳಗೆ ಹೋಗಿಒಣ ಎಲೆಗಳನ್ನು ತರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.