ADVERTISEMENT

ಆನಂದಪುರ: ವಿಜೃಂಭಣೆಯ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 4:50 IST
Last Updated 20 ಫೆಬ್ರುವರಿ 2021, 4:50 IST
ಆನಂದಪುರದ ಲಕ್ಷ್ಮೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಶುಕ್ರವಾರ ವೈಭವದಿಂದ ನಡೆಯಿತು
ಆನಂದಪುರದ ಲಕ್ಷ್ಮೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಶುಕ್ರವಾರ ವೈಭವದಿಂದ ನಡೆಯಿತು   

ಆನಂದಪುರ: ಮಲೆನಾಡ ತಿರುಪತಿ ಎಂದೇ ಇತಿಹಾಸ ಪ್ರಸಿದ್ಧವಾಗಿರುವ ಇಲ್ಲಿನ ಲಕ್ಷ್ಮೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಶುಕ್ರವಾರ ವೈಭವದಿಂದ ನಡೆಯಿತು.

ದೇವರ ರಥೋತ್ಸವದ ಅಂಗವಾಗಿ ತೇರು ಸಂಚರಿಸುವ ಆನಂದಪುರದ ಪ್ರತಿಯೊಂದು ಬೀದಿಯಲ್ಲಿ ತಳಿರು ತೋರಣ ಹಾಗೂ ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಪ್ರತಿಯೊಬ್ಬ ಭಕ್ತರು ಮನೆಯ ಮುಂದೆ ಬಂದ ದೇವರಿಗೆ ಹರಿಕೆ ಸಲ್ಲಿಸಿ, ಹಣ್ಣು ಕಾಯಿ ಹಾಗೂ ಕಾಣಿಕೆ ಸಮರ್ಪಿಸಿದರು.

ವಾದ್ಯ, ಡೊಳ್ಳುಕುಣಿತ, ಚಂಡೆ ರಥೋತ್ಸವಕ್ಕೆ ಮೆರುಗು ತಂದಿತು. ಆನಂದಪುರ ಹಾಗೂ ಸುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದ ಸಾವಿರಾರು ಜನರು ದೇವರ ದರ್ಶನ ಪಡೆದರು. ಪೂಜಾ ವಿಧಿವಿಧಾನ ಹಾಗೂ ಪ್ರಸಾದ ವಿತರಣೆಯ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.