ADVERTISEMENT

ಕೊಡಚಾದ್ರಿ ಬಳಿ ಧರೆ ಕುಸಿತ; ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 15:01 IST
Last Updated 15 ಸೆಪ್ಟೆಂಬರ್ 2020, 15:01 IST
ಹೊಸನಗರ ಕೊಡಚಾದ್ರಿ ತಪ್ಪಲಿನ ವೆಂಕಟರಮಣ ಗುಡ್ಡದ ಬಳಿ ನೀರು ಹರಿಯುವ ಸ್ಥಳದಲ್ಲಿ ಮಣ್ಣು ಜರುಗಿರುವುದು.
ಹೊಸನಗರ ಕೊಡಚಾದ್ರಿ ತಪ್ಪಲಿನ ವೆಂಕಟರಮಣ ಗುಡ್ಡದ ಬಳಿ ನೀರು ಹರಿಯುವ ಸ್ಥಳದಲ್ಲಿ ಮಣ್ಣು ಜರುಗಿರುವುದು.   

ಶಿವಮೊಗ್ಗ: ಕೊಡಚಾದ್ರಿಯ ಹುಲಿದೇವರ ದೇವಸ್ಥಾನದ ಅರ್ಚಕರ ಮನೆಹಿಂಭಾಗದವೆಂಕಟರಮಣ ಗುಡ್ದದ ಮಣ್ಣು ಜರುಗಿದ್ದು, ಅರ್ಚಕರ ಮನೆಯ ಕಾಂಪೌಂಡ್ ಗೋಡೆ ಬಿರುಕು ಬಿಟ್ಟಿದೆ.

ಮೂಕಾಂಬಿಕ ಅರಣ್ಯ ವ್ಯಾಪ್ತಿಗೆ ಸೇರಿದ ಈ ಪ್ರದೇಶದಲ್ಲಿ ಹುಲಿದೇವರು, ಸಿದ್ದೇಶ್ವರ, ಕಾಲಭೈರವೇಶ್ವರ, ಅಮ್ಮನವರ ದೇವಸ್ಥಾನಗಳಿವೆ. ಹುಲಿ ದೇವರ ದೇವಸ್ಥಾನದ ಅರ್ಚಕ ಸಿ.ಆರ್.ನಾಗೇಂದ್ರ ಜೋಗಿ ಅವರ ಮನೆಯ ಹಿಂಭಾಗದಲ್ಲಿ ಮಣ್ಣು ಕುಸಿದಿದೆ.

ಲಾಕ್‌ಡೌನ್ ತೆರವಿನ ನಂತರ ಶನಿವಾರ, ಭಾನುವಾರ 200ರಿಂದ 300ರಷ್ಟು ಜನರು ಬರುತ್ತಿದ್ದಾರೆ. ಸರ್ವಜ್ಞ ಪೀಠಕ್ಕೆ ಇಲ್ಲಿಂದಲೇ ತೆರಳಬೇಕು. ಪವ್ರತಿ ವರ್ಷವೂ ಮಣ್ಣು ಕಸಿಯುತ್ತಿರುವ ಕಾರಣ ಈ ಭಾಗದಲ್ಲಿ ತಡೆಗೋಡೆ ನಿರ್ಮಿಸಬೇಕು ಎನ್ನುವುದು ಅಲ್ಲಿನ ಅರ್ಚಕ ಕುಟುಂಬಗಳ ಒತ್ತಾಯ.

ADVERTISEMENT

ಇಡೀ ಬೆಟ್ಟದ ನೀರು ವೆಂಕಟರಮಣ ಗುಡ್ಡದ ಮೂಲಕವೇ ಹರಿದು ಹೋಗುತ್ತದೆ. ಮಳೆಗಾಲದಲ್ಲಿ ಮಣ್ಣು ಜರುಗುವುದು ಸಹಜ.ಸದಾ ನೀರು ಹರಿಯುವ ಕಾರಣ ಹಲವು ವರ್ಷಗಳಿಂದಲೂ ಅಲ್ಲಿ ದೊಡ್ಡ ಕಂದಕವಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.

‘ಅಲ್ಲಿ ಧರೆ ಕುಸಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೊಸನಗರ ತಹಶೀಲ್ದಾರ್ ಅವರಿಗೆ ಸೂಚಿಸಿದ್ದೇನೆ’ ಎಂದು ಸಾಗರ ಉಪ ವಿಭಾಗಾಧಿಕಾರಿ ಡಾ.ಎಲ್‌.ನಾಗರಾಜ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.