ADVERTISEMENT

ಆಗುಂಬೆ ಘಾಟಿ ದುರಸ್ತಿ: ಹೈದರಾಬಾದ್‌ ತಜ್ಞರ ಮೊರೆ

ಪದೇ ಪದೇ ಗುಡ್ಡ ಕುಸಿತ, ಶಾಶ್ವತ ಪರಿಹಾರ: ಎನ್‌ಎಚ್‌ಎಐ

ವೆಂಕಟೇಶ ಜಿ.ಎಚ್.
Published 11 ಜುಲೈ 2022, 2:41 IST
Last Updated 11 ಜುಲೈ 2022, 2:41 IST
ಶಶಾಂಕ ಹೆಗಡೆ, ಆಗುಂಬೆ ಗ್ರಾಮ ಪಂಚಾಯ್ತಿ ಸದಸ್ಯ
ಶಶಾಂಕ ಹೆಗಡೆ, ಆಗುಂಬೆ ಗ್ರಾಮ ಪಂಚಾಯ್ತಿ ಸದಸ್ಯ   

ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಈಗ ಗುಡ್ಡಕುಸಿದಿರುವ ಜಾಗದಲ್ಲಿ ಮತ್ತೆ ಅಪಾಯ ಎದುರಾಗದಂತೆ ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೈದರಾಬಾದ್‌ನ ತಜ್ಞರ ನೆರವು ಪಡೆಯಲು ಮುಂದಾಗಿದೆ. ತಜ್ಞರ ತಂಡ ಜುಲೈ 12ರಂದು ಮಂಗಳವಾರ ಆಗುಂಬೆಗೆ ಬರಲಿದೆ.

ಘಾಟಿಯ 11 ನೇ ತಿರುವಿನಲ್ಲಿ ಭಾನುವಾರ ಬೆಳಗಿನ ಜಾವ ಗುಡ್ಡ ಕುಸಿದಿದೆ. ಅದೃಷ್ಟವಶಾತ್ ಆ ಸಂದರ್ಭದಲ್ಲಿ ವಾಹನ ಸಂಚಾರ ಇಲ್ಲದೇ ಯಾವುದೇ ಪ್ರಾಣಾಪಾಯ ಆಗಿಲ್ಲ.

‘ಘಾಟಿಯಲ್ಲಿ ಪ್ರತಿ ವರ್ಷವೂ ಗುಡ್ಡ ಕುಸಿಯುವುದು ಆಗುತ್ತಿದೆ. ಆದರೆ ಈ ಬಾರಿ 11ನೇ ತಿರುವಿನಲ್ಲಿ ಸ್ವಲ್ಪ ಜಾಸ್ತಿ ಆಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೈದರಾಬಾದ್‌ನ ತಜ್ಞರ ನೆರವು ಪಡೆಯುತ್ತಿದ್ದೇವೆ. ಗುಡ್ಡ ಕುಸಿಯಲು ಕಾರಣ ತಿಳಿಯಲು ಅವರು ಮಣ್ಣಿನ ಅಧ್ಯಯನ ನಡೆಸಲಿದ್ದಾರೆ‘ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಎಲ್.ಭರಮರೆಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಘಾಟಿ ಕಡಿದಾಗಿರುವುದರಿಂದ ನಿರಂತರ ಮಳೆಗೆ ಮಣ್ಣು ಸಡಿಲಗೊಂಡು ಕುಸಿಯುತ್ತಿದೆ. ಪ್ರತೀ ಮಳೆಗಾಲದಲ್ಲಿ ಇದು ಆಗುತ್ತಿದೆ. ಮಣ್ಣು ಸಡಿಲವಾಗುವುದನ್ನು ತಪ್ಪಿಸಲು ಮೈಕ್ರೋ ಫೈಲಿಂಗ್ ವ್ಯವಸ್ಥೆ, ರಿಟೈನಿಂಗ್ ವಾಲ್ ನಿರ್ಮಿಸಬೇಕೆ ಎಂಬುದನ್ನು ಪರಿಶೀಲಿಸಲಾಗುವುದು. ತಜ್ಞರು ಏನು ಅಭಿಪ್ರಾಯ ಕೊಡುತ್ತಾರೋ ಆ ತಾಂತ್ರಿಕತೆ ಅಳವಡಿಸುತ್ತೇವೆ‘ ಎಂದು ಹೇಳಿದರು.

ನಿರಂತರ ಮಳೆ ಇರುವುದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ದುರಸ್ತಿ ಕಾರ್ಯ ಮಂಗಳವಾರ ದವರೆಗೆ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.