ADVERTISEMENT

ಶಿವಮೊಗ್ಗ | ಚಿರತೆ ಹಲ್ಲು, ಉಗುರು ಸಾಗಣೆ; ಬಂಧನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 14:13 IST
Last Updated 5 ನವೆಂಬರ್ 2024, 14:13 IST
ಸಾಗರ ತಾಲ್ಲೂಕಿನ ದಾಸಕೊಪ್ಪ ಗ್ರಾಮದ ಬಳಿ ಅರಣ್ಯ ಪೊಲೀಸ್ ಸಂಚಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡಿರುವ ಚಿರತೆಯ ಹಲ್ಲು, ಉಗುರು.
ಸಾಗರ ತಾಲ್ಲೂಕಿನ ದಾಸಕೊಪ್ಪ ಗ್ರಾಮದ ಬಳಿ ಅರಣ್ಯ ಪೊಲೀಸ್ ಸಂಚಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡಿರುವ ಚಿರತೆಯ ಹಲ್ಲು, ಉಗುರು.   

ಸಾಗರ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನ ದಾಸಕೊಪ್ಪ ಗ್ರಾಮದ ಪೆಟ್ರೋಲ್ ಬಂಕ್ ಸಮೀಪ ಅಕ್ರಮವಾಗಿ ಚಿರತೆ ಉಗುರು, ಹಲ್ಲನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಅರಣ್ಯ ಸಂಚಾರ ದಳದ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ.

ಶಿಕಾರಿಪುರ ಸಮೀಪದ ಹಾರೊಗೊಪ್ಪ ಗ್ರಾಮದ ಲೋಕೇಶ್ ಬಂಧಿತ. ಅವರಿಂದ ಚಿರತೆಯ 16 ಉಗುರು, ಮೂರು ಹಲ್ಲುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್ಪಿ ಎಸ್.ಎಸ್. ಕಾಶಿ ಅವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರ ದಳದ ಸಿಬ್ಬಂದಿ ಗಣೇಶ್, ವಿಶ್ವನಾಥ, ಆಂಜನೇಯ, ದಿನೇಶ್, ಪ್ರಮೋದ ಕುಮಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.