ADVERTISEMENT

ತಾಂಡಾಗಳಲ್ಲಿ ಮನೆ ಮನೆಗೆ ದೀಪ ತೋರಿಸುವ ಪದ್ಧತಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 13:19 IST
Last Updated 16 ನವೆಂಬರ್ 2023, 13:19 IST
ದೀಪಾವಳಿ ಹಬ್ಬದಲ್ಲಿ ಲಂಬಾಣಿ ಸಮಾಜದ ವಿಶೇಷತೆಗಳಲ್ಲಿ ಒಂದಾದ ಮನೆ ಮನೆಗೆ ದೀಪ ತೋರಿಸುವ ಆಚರಣೆ ಭದ್ರಾವತಿ ತಾಲೂಕಿನ ಲಂಬಾಣಿ ತಾಂಡಗಳಲ್ಲಿ ಕಂಡು ಬಂದಿತು
ದೀಪಾವಳಿ ಹಬ್ಬದಲ್ಲಿ ಲಂಬಾಣಿ ಸಮಾಜದ ವಿಶೇಷತೆಗಳಲ್ಲಿ ಒಂದಾದ ಮನೆ ಮನೆಗೆ ದೀಪ ತೋರಿಸುವ ಆಚರಣೆ ಭದ್ರಾವತಿ ತಾಲೂಕಿನ ಲಂಬಾಣಿ ತಾಂಡಗಳಲ್ಲಿ ಕಂಡು ಬಂದಿತು   

ಭದ್ರಾವತಿ: ದೀಪಾವಳಿ ಹಬ್ಬದಲ್ಲಿ ಲಂಬಾಣಿ ಸಮಾಜದ ವಿಶೇಷತೆಗಳಲ್ಲಿ ಒಂದಾದ ಮನೆ ಮನೆಗೆ ದೀಪ ತೋರಿಸುವ ಆಚರಣೆ ತಾಲ್ಲೂಕಿನ ಲಂಬಾಣಿ ತಾಂಡಾಗಳಲ್ಲಿ ಸಂಭ್ರಮದಿಂದ ನಡೆಯಿತು.

ತಾಲ್ಲೂಕಿನ ಸಿರಿಯೂರು ತಾಂಡಾ ಸೇರಿದಂತೆ ಲಂಬಾಣಿ ಸಮಾಜದವರು ವಾಸಿಸುತ್ತಿರುವ ತಾಂಡಾಗಳಲ್ಲಿ ದೀಪಾವಳಿ ಹಬ್ಬದಂದು ಹೆಣ್ಣು ಮಕ್ಕಳು ಮನೆ ಮನೆಗೆ ತೆರಳಿ ದೀಪ ತೋರಿಸಿ ‘ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ದೇವರಲ್ಲಿ ಪ್ರಾರ್ಥಿಸುವ ಜೊತೆಗೆ ಹಿರಿಯ ಆಶೀರ್ವಾದ ಪಡೆಯುವುದು ವಾಡಿಕೆಯಾಗಿದೆ.

ಸಿರಿಯೂರು ಗ್ರಾಮದ ಮುಖಂಡ ಕೃಷ್ಣನಾಯ್ಕ ನೇತೃತ್ವದಲ್ಲಿ ಗ್ರಾಮದ ಹೆಣ್ಣು ಮಕ್ಕಳು ಮನೆ ಮನೆಗೆ ದೀಪ ತೋರಿಸುವ ಆಚರಣೆ ನಡೆಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.