ADVERTISEMENT

ಲಿಂಗನಮಕ್ಕಿ: ಸೊರಗಿದ ಜಲಾಶಯದ ಒಡಲು

ಶರಾವತಿ ಕೊಳ್ಳದಲ್ಲಿ ಚುರುಕಾದ ಮುಂಗಾರು: ನೀರು ಶೇಖರಣೆಯಲ್ಲಿ ಅಲ್ಪ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 5:40 IST
Last Updated 8 ಜುಲೈ 2022, 5:40 IST
ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದು
ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದು   

ಕಾರ್ಗಲ್: ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟವು ಸುಮಾರು 15 ಅಡಿ ಕಡಿಮೆ ಇದ್ದು, ಮುಂಬರುವ ದಿನಗಳಲ್ಲಿ ಜಲ ವಿದ್ಯುತ್‌ ಉತ್ಪಾದನೆಗೆ ತೊಂದರೆಯಾಗಬಹುದು ಎಂದು ಆತಂಕ ಮೂಡಿದೆ.

156 ಟಿಎಂಸಿ ಅಡಿ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 38.36 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಇದು ಜಲಾಶಯದ ಗರಿಷ್ಠ ಸಂಗ್ರಹಣಾ ಸಾಮರ್ಥ್ಯದ ಕಾಲುಭಾಗದಷ್ಟೇ ಆಗಿದ್ದು, ಗಣನೀಯ ಪ್ರಮಾಣದಲ್ಲಿ ನೀರಿನ ಕೊರತೆ ಎದುರಾಗಿದೆ. ಈ ಸಾಲಿನ ಬೇಸಿಗೆಯಲ್ಲಿ ಭಾರಿ ಪ್ರಮಾಣದ ನೀರು ಬಳಕೆಯಾಗಿದ್ದು, ಜಲಾಶಯದ ಒಡಲು ಸೊರಗಲು ಪ್ರಮುಖ ಕಾರಣವಾಗಿದೆ.

ಈಗಷ್ಟೇ ಮುಂಗಾರು ಚುರುಕುಗೊಂಡಿದ್ದು, ಒಳಹರಿವಿನ ಪ್ರಮಾಣ 57,638 ಕ್ಯುಸೆಕ್‌ಗೆ ಏರಿಕೆಯಾಗಿರುವುದು ಆಶಾದಾಯಕವಾಗಿದೆ.

ADVERTISEMENT

ಶರಾವತಿ ಕೊಳ್ಳದಲ್ಲಿ ಅಧಿಕ ಮಳೆ ಸುರಿಯುತ್ತಿರುವ ಕಾರಣ ವಿದ್ಯುತ್ ಉತ್ಪಾದನೆಗೆ ಜಲಾಶಯದಿಂದ ಬಳಸುವ ಹೊರಹರಿವಿನ ಪ್ರಮಾಣವನ್ನು ಗರಿಷ್ಠ ಮಟ್ಟದಲ್ಲಿ ನಿಲ್ಲಿಸಲಾಗಿದ್ದು, ಕೇವಲ 2,448 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.

ಪ್ರಮುಖವಾದ 5 ಜಲವಿದ್ಯುದಾಗರಗಳಾದ ಲಿಂಗನಮಕ್ಕಿ, ಮಹಾತ್ಮ ಗಾಂಧಿ, ಶರಾವತಿ, ಗೇರುಸೊಪ್ಪ ಮತ್ತು ಅಂಬುತೀರ್ಥ ಕಿರು ಜಲವಿದ್ಯುದಾಗಾರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಲಿಂಗನಮಕ್ಕಿ ಜಲಾಶಯದ ನೀರು ಬಳಕೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.