ADVERTISEMENT

ಲಿಂಗನಮಕ್ಕಿ ಜಲಾಶಯ: ಒಳಹರಿವು 87,496 ಕ್ಯುಸೆಕ್, ದಾಖಲೆ ಪ್ರಮಾಣದ ಏರಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 4:21 IST
Last Updated 19 ಜುಲೈ 2024, 4:21 IST
ಲಿಂಗನಮಕ್ಕಿ ಜಲಾಶಯ
ಲಿಂಗನಮಕ್ಕಿ ಜಲಾಶಯ   

ಶಿವಮೊಗ್ಗ: ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಈ ಮುಂಗಾರು ಹಂಗಾಮಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಲಿಂಗನಮಕ್ಕಿ ಜಲಾಶಯಕ್ಕೆ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 87,496 ಕ್ಯುಸೆಕ್ ನೀರು ಹರಿದುಬಂದಿದೆ. ಗುರುವಾರ ಬೆಳಿಗ್ಗೆ ಆ ಪ್ರಮಾಣ 69,226 ಕ್ಯುಸೆಕ್ ಇತ್ತು. 1819 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1791.50 ಅಡಿ ನೀರು ಇದೆ. ಗುರುವಾರ ಬೆಳಿಗ್ಗೆ ಜಲಾಶಯದಲ್ಲಿ ನೀರಿನ ಮಟ್ಡ 1787.80 ಅಡಿ ಇತ್ತು. 24 ಗಂಟೆಗಳಲ್ಲಿ 4 ಅಡಿಯಷ್ಡು ನೀರಿನ ಸಂಗ್ರಹ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 1758.95 ಅಡಿ ನೀರು ಸಂಗ್ರಹ ಇತ್ತು.

ಕಳೆದ 24 ಗಂಟೆಗಳಲ್ಲಿ ಶರಾವತಿ ಜಲಾನಯನ ಪ್ರದೇಶದ ಹೊಸನಗರ ತಾಲ್ಲೂಕಿನ ಚಕ್ರಾದಲ್ಲಿ ಅತಿಹೆಚ್ಚು 28.5 ಸೆಂ.ಮೀ ಮಳೆ ದಾಖಲಾಗಿದೆ. ಮಾಸ್ತಿಕಟ್ಟೆ 23.5, ಹುಲಿಕಲ್ 23.1, ಮಾಣಿ 20.5, ಸಾವೇಹಕ್ಲು 18.2, ಯಡೂರಿನಲ್ಲಿ 17.5 ಸೆಂ.ಮೀ ಮಳೆ ಸುರಿದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.