ADVERTISEMENT

ಈಶ್ವರಪ್ಪ ಬಿಜೆಪಿಯ ಬಿ ಟೀಂ, ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಹಿನ್ನಡೆ ಆಗೊಲ್ಲ: ಮಧು

ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಕೆ ಏ.15ಕ್ಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 8:27 IST
Last Updated 12 ಏಪ್ರಿಲ್ 2024, 8:27 IST
<div class="paragraphs"><p>ಸಚಿವ ಮಧು ಬಂಗಾರಪ್ಪ</p></div>

ಸಚಿವ ಮಧು ಬಂಗಾರಪ್ಪ

   

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಯ ಬಿ ಟೀಂ. ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಆಗುವುದಿಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ತಮ್ಮನ್ನು ರಾಜಕೀಯವಾಗಿ ಹಾಳು ಮಾಡಿದವರ ವಿರುದ್ಧ ಈಶ್ವರಪ್ಪ ಹೋರಾಡುತ್ತಿದ್ದಾರೆ. ಅದು ಬಿಜೆಪಿಯೊಳಗಿನ ಆಂತರಿಕ ಕಲಹ. ಈಶ್ವರಪ್ಪ ಅವರನ್ನು ವ್ಯಕ್ತಿಗತವಾಗಿ ನೊಡಿದರೆ ಬೇಸರವಾಗುತ್ತೆ. ಆದರೆ ಅವರ ಸಿದ್ದಾಂತ ನೋಡಿ ಮರುಕ ಹುಟ್ಟುತ್ತಿಲ್ಲ' ಎಂದರು.

ADVERTISEMENT

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ವಿರುದ್ಧ ಹಗುರವಾಗಿ ಮಾತಾಡುವುದು, ಟೀಕೆ ಮಾಡುವುದು ನಿಲ್ಲಿಸಿ. ಗೀತಾ ವಿಷಯಕ್ಕೆ ಬರಬೇಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ತಾಕೀತು ಮಾಡಿದ ಮಧು ಬಂಗಾರಪ್ಪ, 'ನಿಮ್ಮ ಹಣೇಬರಹವನ್ನು ಈಶ್ವರಪ್ಪ ಬೀದಿಯಲ್ಲಿಟ್ಟು ಹರಾಜು ಹಾಕುತ್ತಿದ್ದಾರೆ. ಮೊದಲು ಅವರಿಗೆ ಉತ್ತರಕೊಡಿ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಯ ಭರವಸೆಯಂತೆ 10 ಕೆ.ಜಿ ಅಕ್ಕಿ ಕೊಡಲಿಲ್ಲ ಎಂದು ಆರೋಪಿಸುವ ಬಿ.ವೈ.ರಾಘವೇಂದ್ರ, ಭಾರತ್ ಅಕ್ಕಿ ಎಲ್ಲಿ ಹೋಯಿತು ಎಂದು ಮೊದಲು ಉತ್ತರಿಸಲಿ ಎಂದರು.

ಏಪ್ರಿಲ್ 15 ರಂದು ಗೀತಾ ಶಿವರಾಜ ಕುಮಾರ್ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಂತರ ಬಹಿರಂಗ ಸಭೆ ನಡೆಯಲಿದೆ ಎಂದರು.

ಈ ಬಾರಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಮೇಲೆ ಚುನಾವಣೆ ಎದುರಿಸಿ ಗೆಲ್ಲಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.