ಕಾರ್ಗಲ್: ನಾಡು, ನುಡಿ, ನೆಲ, ಜಲ ರಕ್ಷಣೆಯ ವಿಚಾರಗಳು ಬಂದಾಗ ಕನ್ನಡಿಗರು ಸದಾ ಕಂಕಣಬದ್ಧರಾಗಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಪೌರಾಯುಕ್ತ ಪಿ.ಎಲ್. ಆನಂದ್ ಸಲಹೆ ನೀಡಿದರು.
ಜೋಗದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶರಾವತಿ ಸ್ನೇಹಿತರ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜನ್ಮಭೂಮಿಯ ಋಣವನ್ನು ಸಮಯ ಬಂದಾಗ ಕಿಂಚಿತ್ತಾದರು ತೀರಿಸಲು ಪ್ರತಿಯೊಬ್ಬ ಕನ್ನಡಿಗನೂ ಪ್ರಯತ್ನಿಸಬೇಕು’ ಎಂದು ಮನವಿ ಮಾಡಿದರು.
ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಎಚ್.ಡಿ. ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಲ್. ರಾಜಕುಮಾರ್, ಕೆಪಿಸಿ ಅಧಿಕಾರಿಗಳಾದ ದಿನೇಶ್, ತಿಪ್ಪೇಸ್ವಾಮಿ, ಎಚ್.ಆರ್. ರಾಜು, ಮೈಕಲ್, ಜೇಮ್ಸ್ ಬಾಬು, ಪ್ರಕಾಶ, ಚಂದ್ರು ಮೈಸೂರುಉಪಸ್ಥಿತರಿದ್ದರು.
ಭುವನೇಶ್ವರಿ ದೇವಿಯ ಪುತ್ಥಳಿಯ ಮೆರವಣಿಗೆ ನಡೆಯಿತು. ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.