ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಚಿಕಿತ್ಸಾ ವಿಧಾನದ ಇತಿಹಾಸ ಸಾರುವ ವೈದ್ಯಕೀಯ ಸಲಕರಣೆಗಳ ಸಂಗ್ರಹ ‘ವೈದ್ಯ ಸಾಧನ ಕೋಶ' ಸಂಗ್ರಹಾಲಯವನ್ನು ಶುಕ್ರವಾರ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಲೋಕಾರ್ಪಣೆ ಮಾಡಿದರು.
ಬ್ರಿಟಿಷರ ಕಾಲದಲ್ಲಿ ಆರಂಭವಾದ ಈ ಆಸ್ಪತ್ರೆ ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳ ಜನರ ಆರೋಗ್ಯದ ಪ್ರಮುಖ ಕೇಂದ್ರವಾಗಿತ್ತು.
ಆಸ್ಪತ್ರೆಯಲ್ಲಿ ಆರಂಭದ ಕಾಲದಲ್ಲಿ ಚಿಕಿತ್ಸಾ ವಿಧಾನ ಹೇಗಿತ್ತು. ಸಲಕರಣೆಗಳ ಬಳಕೆ ಹೇಗೆ? ಆಗಿನ ಗಾಜಿನ ಚುಚ್ಚುಮದ್ದು ಉಪಕರಣ, ಔಷಧ ಸಂಗ್ರಾಲಯದ ಉಪಕರಣ, ದೊಡ್ಡ ದೊಡ್ಡ ಗಾಜಿನ ಬಾಟಲಿಗಳು, ಶಸ್ತ್ರ ಚಿಕಿತ್ಸೆಗಳ ಉಪಕರಣಗಳು ಹೀಗೆ ಹಲವಾರು ರೀತಿಯ ಚಿಕಿತ್ಸಾ ವಿಧಾನಗಳನ್ನು ನೆನಪಿಸುತ್ತದೆಈ ವೈದ್ಯ ಸಾಧನ ಕೋಶ.ಈ ಕೋಶವನ್ನು ಮತ್ತಷ್ಟು ವಿಸ್ತರಿಸಿದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ವಸ್ತು ಸಂಗ್ರಹಾಲಯವಾಗಿ ರೂಪುಗೊಳ್ಳಲಿದೆ.
ಮೆಗ್ಗಾನ್ ಆಸ್ಪತ್ರೆ ಸ್ಥಾಪನೆಗೆ ಕಾರಣರಾದ ಬ್ರಿಟಿಷ್ ಅಧಿಕಾರಿಗಳ ಭಾವಚಿತ್ರವನ್ನೂ ಅನಾವರಣ ಮಾಡಲಾಯಿತು. ಚಕಿತ್ಸಾ ಟ್ರ್ಯಾಲಿಗಳನ್ನುಪ್ರದರ್ಶಿಸಲಾಯಿತು.
ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಆರ್.ರಘುನಂದನ್ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.