ಸಾಗರ: ‘ನಿರಂತರವಾಗಿ ನೃತ್ಯದ ಅಭ್ಯಾಸ ಕೈಗೊಳ್ಳುವುದರಿಂದ ಮಾನಸಿಕ, ದೈಹಿಕ ಸದೃಢತೆ ಸಾಧಿಸಬಹುದು’ ಎಂದು ಉದ್ಯಮಿ ವಿಠ್ಠಲ ಪೈ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಸ್ಟೈಲ್ ಡ್ಯಾನ್ಸ್ ಅಕಾಡೆಮಿ ತನ್ನ 16ನೇ ವಾರ್ಷಿಕೋತ್ಸವದ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ‘ನರ್ತನ–2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನೃತ್ಯಕ್ಕೆ ಸಂಬಂಧಪಟ್ಟ ಹಲವು ರೀತಿಯ ಸ್ಪರ್ಧೆಗಳು ನಡೆಯುತ್ತಿರುವುದು ಆ ಕಲಾ ಪ್ರಕಾರದ ಮೇಲಿನ ಆಸಕ್ತಿ ಹೆಚ್ಚಲು ಕಾರಣವಾಗಿದೆ. ಆದರೆ, ಕೇವಲ ಸ್ಪರ್ಧೆಗಾಗಿ ಕಲಿಕೆ ಎಂಬ ಮನೋಭಾವ ಸರಿಯಲ್ಲ. ಉತ್ತಮ ಅಭಿರುಚಿ, ಹವ್ಯಾಸ ಬೆಳೆಸಿಕೊಳ್ಳಲು ನೃತ್ಯದಂತಹ ಕಲಾ ಪ್ರಕಾರದಲ್ಲಿ ತೊಡಗಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಅಪಘಾತ ರಹಿತ ನಿವೃತ್ತ ಬಸ್ ಚಾಲಕ ರಾಜು ನಾಯರ್ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ಆರ್.ಶ್ರೀನಿವಾಸ್, ಪ್ರಮುಖರಾದ ಪ್ರವೀಣ್, ಪವನ್, ಮಂಜುನಾಥ ಬಾಳೂರು, ಸಂದೀಪ್ ಇದ್ದರು. ಸ್ಟೈಲ್ ಡ್ಯಾನ್ಸ್ ಅಕಾಡೆಮಿ ಸಂಸ್ಥಾಪಕ ಸೂರಜ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ನೃತ್ಯ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.