ADVERTISEMENT

ಚುನಾವಣೆ ಪಾವಿತ್ರ್ಯ ನಾಶಕ್ಕೆ ಕಡಿವಾಣ ಹಾಕಿ: ಆಯನೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 15:36 IST
Last Updated 1 ಜೂನ್ 2024, 15:36 IST
<div class="paragraphs"><p>ಆಯನೂರು ಮಂಜುನಾಥ್</p></div>

ಆಯನೂರು ಮಂಜುನಾಥ್

   

ಶಿವಮೊಗ್ಗ: ವಿಧಾನಪರಿಷತ್‌ನ ಪದವೀಧರ ಕ್ಷೇತ್ರದ ಚುನಾವಣೆಯ ಪಾವಿತ್ರ್ಯತೆ ಹಾಳುಮಾಡುತ್ತಿರುವ ದುಷ್ಟ ಪರಂಪರೆಗೆ ಕಡಿವಾಣ ಹಾಕಲೇಬೇಕಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.

ಬಿಜೆಪಿಯ ಅಭ್ಯರ್ಥಿ ವಿದ್ಯಾವಂತರ ಮತಗಳನ್ನು ಖರೀದಿಸುತ್ತಿದ್ದಾರೆ. ಹಣ ಮತ್ತು ಹೆಂಡದ ವ್ಯವಸ್ಥೆ ನಿರಂತರವಾಗಿ ಮಾಡುತ್ತಿದ್ದಾರೆ. ವಿದ್ಯಾವಂತರ ಕ್ಷೇತ್ರವನ್ನು ಅಪಕೀರ್ತಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಳೆದ 40 ವರ್ಷಗಳಿಂದ ನಾನು ಹಲವು ಚುನಾವಣೆಗಳನ್ನು ಮಾಡಿದ್ದೇನೆ. ಆದರೆ, ಈ ಬಾರಿಯ ಚುನಾವಣೆ ಇಷ್ಟೊಂದು ಹೀನವಾಗಿರುವುದು ನಾನು ಕಂಡಿರಲಿಲ್ಲ ಎಂದರು.

ADVERTISEMENT

ವೈದ್ಯಕೀಯ ಕ್ಷೇತ್ರವನ್ನು ಉದ್ಯಮವನ್ನಾಗಿ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಕರಪತ್ರದಲ್ಲಿಯೇ ಹಾಕಿಕೊಂಡಿದ್ದಾರೆ. ಇದರ ಹಿಂದಿನ ಸತ್ಯವನ್ನು ಮತದಾರರೇ ಊಹಿಸಬೇಕಾಗುತ್ತದೆ. ಕೊರೊನಾ ಸಂದರ್ಭದಲ್ಲಿಅವರು ಎಂತಹ ಫಲಾನುಭವಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

ನಾನು ಮತಕ್ಕೆ ಮೌಲ್ಯ ಕೊಡುವೆ, ಬಿಜೆಪಿ ಈ ಹಿಂದೆ ಕೆಸರಿನಲ್ಲಿ ಕಮಲ ಅರಳಿಸಿತ್ತು. ಈಗ ಅರಳಿದ ಕಮಲಕ್ಕೆ ಕೆಸರು ಮೆತ್ತಿಕೊಳ್ಳುತ್ತಿದೆ. ಅವರಲ್ಲಿ ಹಣವಿದೆ. ನನಗೆ ಛಲವಿದೆ. ನಾನು ಎಂದು ಭ್ರಷ್ಟಚಾರ ಮಾಡಲಿಲ್ಲ. ಆದರೆ ಹೋರಾಟವನ್ನೇ ಮಾಡಿಕೊಂಡು ಬಂದಿದ್ದೇನೆ. ಯಾವುದೇ ಸಂದರ್ಭದಲ್ಲೂ ಹೋರಾಟ ಬಿಟ್ಟುಕೊಟ್ಟಿಲ್ಲ. ಎದುರಾಳಿಗಳಿಗೆ ಯಾವ ಹೋರಾಟದ ಹಿನ್ನೆಲೆಯೂ ಇಲ್ಲ. ವಾತಾವರಣ ಕಾಂಗ್ರೆಸ್ ಪರವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಶ್ರೀನಿವಾಸ ಕರಿಯಣ್ಣ, ವೈ.ಎಚ್.ನಾಗರಾಜ್, ಟಿ.ನೇತ್ರಾವತಿ, ಶಾಂತವೀರನಾಯಕ, ಧೀರರಾಜ್ ಹೊನ್ನವಿಲೆ, ಹಿರಣ್ಣಯ್ಯ, ಶಿ.ಜು.ಪಾಶ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.