ADVERTISEMENT

ಸ್ವಾರ್ಥಕ್ಕಾಗಿ ಬಿಜೆಪಿ ತೊರೆದ ಆಯನೂರು: ಮಲ್ಲಿಕಾರ್ಜುನ ದ್ವಾರಳ್ಳಿ ಆರೋಪ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 15:26 IST
Last Updated 1 ಜೂನ್ 2024, 15:26 IST
ಆನವಟ್ಟಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಮುಖಂಡರು ಮತಯಾಚಿಸಿದರು
ಆನವಟ್ಟಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಮುಖಂಡರು ಮತಯಾಚಿಸಿದರು   

ಆನವಟ್ಟಿ: ಆಯನೂರು ಮಂಜುನಾಥ್‌ ಅವರು ತಮ್ಮ ಸ್ವಾರ್ಥ ರಾಜಕರಣಕ್ಕಾಗಿ ಬಿಜೆಪಿ ತೊರೆದು ಮತದಾರರನ್ನು ಅವಮಾನಿಸಿದ್ದು, ಪದವೀಧರ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವರು ಎಂದು ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ದ್ವಾರಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಆನವಟ್ಟಿ ಪ್ರಥಮ ದರ್ಜೆ ಕಾಲೇಜು ಸೇರಿ ಎಲ್ಲಾ ಶಾಲಾ ಕಾಲೇಜುಗಳಿಗೆ ತೆರಳಿ ಪದವೀಧರ ಕ್ಷೇತ್ರದ ಧನಂಜಯ ಸರ್ಜಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಭೋಜೇಗೌಡ ಪರ ಮತಯಾಚಿಸಿ ಮಾತನಾಡಿದರು.

ಮತದಾನ ಮಾಡುವಾಗ ಪ್ರಾಶಸ್ತ್ಯ ಮತದಾನ ಮಾಡುವ ವಿಧಾನಗಳನ್ನು ಸರಿಯಾಗಿ ತಿಳಿದುಕೊಂಡು ಮತಗಳು ತಿರಸ್ಕೃತ ಆಗದಂತೆ ಎಚ್ಚರ ವಹಿಸಿ ಮತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಸಲಹೆ ನೀಡಿದರು.

ADVERTISEMENT

ಎಪಿಎಂಸಿ ಮಾಜಿ ಅಧ್ಯಕ್ಷ ದಯಾನಂದ ಗೌಡ ಮಾತನಾಡಿದರು. ಕೋಟ್ರಯ್ಯ ಸ್ವಾಮಿ, ಸುಧಾ ಶಿವಪ್ರಸಾದ್ ಕುಬಸದ್‍, ತಾಲ್ಲೂಕು ಕಾರ್ಯದರ್ಶಿ ಬಿ.ಎಚ್‍.ಕೃಷ್ಣಮೂರ್ತಿ, ಮುಖಂಡರಾದ ಬಸವನಗೌಡ ಮಲ್ಲಾಪುರ, ಕನ್ನಮ್ಮನವರ್ ಮಂಜಣ್ಣ, ಶಾಂತಪ್ಪ ಬಡಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.