ADVERTISEMENT

ಪೌರವಿಹಾರ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿಲ್ಲ

ಪೌರವಿಹಾರ ಸಂಸ್ಥೆ ಮಾಜಿ ಕಾರ್ಯದರ್ಶಿ ಎಚ್.ಎಸ್. ರವೀಂದ್ರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 16:25 IST
Last Updated 14 ಜೂನ್ 2024, 16:25 IST
ಎಚ್.ಎಸ್. ರವೀಂದ್ರ
ಎಚ್.ಎಸ್. ರವೀಂದ್ರ   

ಶಿಕಾರಿಪುರ: ಪೌರವಿಹಾರ ಸಂಸ್ಥೆಯಲ್ಲಿ ತಮ್ಮ ಆಡಳಿತ ಮಂಡಳಿ ಅವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಪೌರವಿಹಾರ ಸಂಸ್ಥೆ ಮಾಜಿ ಕಾರ್ಯದರ್ಶಿ ಎಚ್.ಎಸ್. ರವೀಂದ್ರ ಸ್ಪಷ್ಟನೆ ನೀಡಿದರು.

‘ಪೌರವಿಹಾರ ಸಂಸ್ಥೆಯು 70 ವರ್ಷಗಳ ಇತಿಹಾಸವಿದ್ದು, ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ರಾಜಕೀಯ ಉದ್ದೇಶದಿಂದ ಈ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸುದ್ದಿಗೋಷ್ಠಿ ಮೂಲಕ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯರು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ’ ಎಂದು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಏ. 18ರಂದು ಸರ್ವ ಸದಸ್ಯರ ವಾರ್ಷಿಕ ಸಭೆ ಕರೆಯಲಾಗಿತ್ತು. 216 ಸದಸ್ಯರಿಗೆ ಆಡಿಟ್ ವರದಿ ಹೊಂದಿದ ಆಹ್ವಾನ ಪತ್ರಿಕೆ ತಲುಪಿಸಿ ಸಹಿ ಪಡೆಯಲಾಗಿತ್ತು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ತಹಶೀಲ್ದಾರ್ ಅವರು ಸರ್ವ ಸದಸ್ಯರ ಸಭೆ ಮುಂದೂಡುವಂತೆ ಆದೇಶಿಸಿದ್ದರಿಂದ ಸರ್ವ ಸದಸ್ಯರ ಸಭೆ ಮುಂದೂಡಲಾಗಿತ್ತು ಎಂದರು.

ADVERTISEMENT

ನಾನು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದೇನೆ. ನನ್ಮ ಹೆಸರನ್ನು ಹಾಳು ಮಾಡಲು ಹಾಗೂ ತೇಜೋವಧೆ ಮಾಡಲು ನನ್ನ ಎದುರಾಳಿಯ ಚಿಕ್ಕಪ್ಪ ಹಾಗೂ ಸಂಸ್ಥೆಯ ಹಿರಿಯ ಸದಸ್ಯರೊಬ್ಬರು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪೌರವಿಹಾರ ಸಂಸ್ಥೆ ಮಾಜಿ ಅಧ್ಯಕ್ಷ ಏಕೇಶ್ವರಪ್ಪ , ಉಪಾಧ್ಯಕ್ಷ ಶ್ರೀಧರ ಕರ್ಕಿ, ಮಾಜಿ ಉಪಾಧ್ಯಕ್ಷ ಕರಿಬಸಪ್ಪ, ಮಾಜಿ ನಿರ್ದೇಶಕ ಹರಿಹರ ಸಿದ್ದಲಿಂಗೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.