ADVERTISEMENT

ಎನ್‌ಎಚ್ ಆಸ್ಪತ್ರೆ: ವಿಶ್ವ ಆಸ್ಟಿಯೊಪೊರೋಸಿಸ್ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:54 IST
Last Updated 22 ಅಕ್ಟೋಬರ್ 2024, 15:54 IST
ನಾರಾಯಣ ಹೆಲ್ತ್
ನಾರಾಯಣ ಹೆಲ್ತ್   

ಶಿವಮೊಗ್ಗ: ವಿಶ್ವ ಆಸ್ಟಿಯೊಪೊರೋಸಿಸ್ ದಿನದ ಅಂಗವಾಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಈಚೆಗೆ ವಿಶ್ವ ಆಸ್ಟಿಯೊಫೊರೊಸಿಸ್ ದಿನ ಆಚರಿಸಲಾಯಿತು.

‘2024ರ ಆಸ್ಟಿಯೊಪೊರೋಸಿಸ್ ದಿನದ ಘೋಷವಾಕ್ಯವಾದ ‘ಸೇ ನೊ ಟು ಫ್ರಾಗೈಲ್‌ ಬೋನ್ಸ್‌’ ಹೇಳುವುದರ ಮುಖಾಂತರ ಪ್ರಪಂಚದಾದ್ಯಂತ ಅಕ್ಟೋಬರ್ 20ರಂದು ಆಸ್ಟಿಯೊಪೊರೋಸಿಸ್ ದಿನ ಆಚರಿಸುತ್ತಾರೆ’ ಎಂದು ಕೀಲು ಮತ್ತು ಮೂಳೆ ವಿಭಾಗದ ಡಾ.ಎಂ.ಎಲ್. ಚೇತನ್ ಹೇಳಿದರು. 

ದೇಹವು ಮೂಳೆ ಮತ್ತು ಮಾಂಸ ಖಂಡಗಳ ಹೊದಿಕೆಯಾಗಿದೆ. ಮೂಳೆಗಳ ಸವೆತದ ರೋಗವು ಆರಂಭಿಕ ಹಂತದಲ್ಲಿ ಯಾವುದೇ ಸೂಚನೆಗಳಿಲ್ಲದೆ ಬರುತ್ತದೆ. ಮೂಳೆಗಳ ಆರೈಕೆಯಲ್ಲಿ ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ಪ್ರಾಮುಖ್ಯತೆಯ ಬಗ್ಗೆ ಅವರು ಸೂಕ್ತ ಸಲಹೆಗಳೊಂದಿಗೆ ವಿವರಿಸಿದರು.

ADVERTISEMENT

ಡಾ.ಎಂ.ಬಿ. ಅಭಿಷೇಕ್, ಕೀಲು ಮತ್ತು ಮೂಳೆಗಳ ಆರೈಕೆ ಮತ್ತು ಪೋಷಣೆಯ ಬಗ್ಗೆ ಹಾಗೂ ಮೂಳೆಗಳ ಸವೆತದಿಂದ ಉಂಟಾಗುವ ತೊಂದರೆಗಳ ಬಗ್ಗೆ ಪ್ರತಿ ನಿತ್ಯ ಜೀವನದಲ್ಲಿ ನಿಯಮಿತವಾದ ವ್ಯಾಯಾಮ, ದೈಹಿಕ ಚಟುವಟಿಕೆಗಳು ಮತ್ತು ಪ್ರತಿ ನಿತ್ಯ ನಿರ್ದಿಷ್ಟ ಪ್ರಮಾಣದಲ್ಲಿ ಸೈಕಲ್ ತುಳಿಯುವುದರಿಂದ ಮೂಳೆಗಳ ಸವೆತವನ್ನು ನಿಯಂತ್ರಿಸಬಹುದು ಎಂದು ಮಾಹಿತಿ ನೀಡಿದರು. ಮೂಳೆಗಳ ಸವೆತದಿಂದಾಗುವ ತೊಂದರೆಗಳಿಗೆ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿಯನ್ನೂ ನೀಡಿದರು.

ವಿಶ್ವ ಆಸ್ಟಿಯೊಪೊರೋಸಿಸ್ ದಿನದ ಅಂಗವಾಗಿ ಅಕ್ಟೋಬರ್ 23ರಂದು ಮೂಳೆ ಸಾಂದ್ರತಾ ಉಚಿತ ಪರೀಕ್ಷಾ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಪಿ. ವರ್ಗಿಸ್ ಜಾನ್‌ ತಿಳಿಸಿದರು.

ಮೊದಲು ನೋಂದಾಯಿಸಿದ 100 ಜನರಿಗೆ ಮಾತ್ರ ಆದ್ಯತೆ ನೀಡಲಾಗುವುದು. ನೋಂದಣಿಗೆ 9538897698 ಸಂಪರ್ಕಿಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.