ADVERTISEMENT

ಯಕ್ಷಗಾನದಲ್ಲಿ ಮನರಂಜನೆ ಜೊತೆ ಜೀವನದ ಸಂದೇಶ: ಪಟ್ಲ ಸತೀಶ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 14:25 IST
Last Updated 25 ಜೂನ್ 2024, 14:25 IST
ಸಾಗರಕ್ಕೆ ಸಮೀಪದ ಮಡಸೂರು-ಲಿಂಗದಹಳ್ಳಿಯ ರಾಮಕೃಷ್ಣ ವಸತಿ ವಿದ್ಯಾಲಯದಲ್ಲಿ ಸೋಮವಾರ ನಡೆದ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು
ಸಾಗರಕ್ಕೆ ಸಮೀಪದ ಮಡಸೂರು-ಲಿಂಗದಹಳ್ಳಿಯ ರಾಮಕೃಷ್ಣ ವಸತಿ ವಿದ್ಯಾಲಯದಲ್ಲಿ ಸೋಮವಾರ ನಡೆದ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು   

ಸಾಗರ: ಯಕ್ಷಗಾನ ಕಲೆಯಲ್ಲಿ ಮನರಂಜನೆ ಜೊತೆಗೆ ಜೀವನದ ಕುರಿತ ಮಹತ್ವದ ಸಂದೇಶಗಳು ಅಡಗಿವೆ ಎಂದು ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಸಮೀಪದ ಮಡಸೂರು-ಲಿಂಗದಹಳ್ಳಿಯ ರಾಮಕೃಷ್ಣ ವಸತಿ ವಿದ್ಯಾಲಯದಲ್ಲಿ ಯಕ್ಷದ್ರವ ಪಟ್ಲ ಪೌಂಡೇಷನ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರಾಮಾಯಣ, ಮಹಾಭಾರತ, ಉಪನಿಷತ್‌ನ ಹಲವು ಸಂಗತಿಗಳನ್ನು ಯಕ್ಷಗಾನ ಪ್ರಸಂಗಗಳ ಮೂಲಕ ಮನಮುಟ್ಟುವಂತೆ ತಲುಪಿಸಲು ಸಾಧ್ಯವಿದೆ. ವಿದ್ಯಾರ್ಥಿಗಳು ಯಕ್ಷಗಾನ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಅವರ ಮನೋವಿಕಾಸಕ್ಕೆ ಅದು ಸಹಕಾರಿಯಾಗುತ್ತದೆ ಎಂದು ಹೇಳಿದರು.

ADVERTISEMENT

ರಾಮಕೃಷ್ಣ ವಿದ್ಯಾಲಯದ ಮುಖಸ್ಥ ದೇವರಾಜ್ ಡಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನಗರ ರಾಘವೇಂದ್ರ, ಎಸ್.ವಿ.ಹಿತಕರ ಜೈನ್, ಗೋಪಾಲಮೂರ್ತಿ, ನಾರಾಯಣ, ಸರಿತಾ ದೇವರಾಜ್, ಹುಚ್ಚಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.