ADVERTISEMENT

ಜೋಗ ಜಲಪಾತಕ್ಕೆ ಜೀವಕಳೆ ತಂದ ಮುಂಗಾರು ಪೂರ್ವ ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 22 ಮೇ 2024, 15:33 IST
Last Updated 22 ಮೇ 2024, 15:33 IST
<div class="paragraphs"><p>ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ಸಮೀಪದ ಜೋಗ ಜಲಪಾತದಲ್ಲಿ ಬುಧವಾರ ಜಲಧಾರೆ ಧುಮುಕುತ್ತಿದ್ದ ದೃಶ್ಯ ಕಂಡುಬಂತು</p></div>

ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ಸಮೀಪದ ಜೋಗ ಜಲಪಾತದಲ್ಲಿ ಬುಧವಾರ ಜಲಧಾರೆ ಧುಮುಕುತ್ತಿದ್ದ ದೃಶ್ಯ ಕಂಡುಬಂತು

   

ಕಾರ್ಗಲ್: ಶರಾವತಿ ಕೊಳ್ಳದ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಸುರಿಯುತ್ತಿರುವುದರಿಂದ, ಲಿಂಗನಮಕ್ಕಿ ಜಲಾನಯನ ಪ್ರದೇಶದ ಕೆಳದಂಡೆ ಭಾಗದಲ್ಲಿ ಮಳೆ ನೀರು ಹರಿಯುತ್ತಿದೆ. ಇದರಿಂದ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳಲ್ಲಿ ಜಲಧಾರೆ ಧುಮುಕುತ್ತಿದೆ. 

ಬೇಸಿಗೆಯ ಬಿಸಿಲ ಝಳದಿಂದಾಗಿ ಜಲಮೂಲ ಬತ್ತಿ ಹೋಗಿದ್ದರಿಂದ ಜಲಪಾತದ ಸೌಂದರ್ಯ ಸೊರಗಿತ್ತು. ಜೋಗಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರಿಗೆ ಕೇವಲ ಬೋರ್ಬಂಡೆಗಳ ದರ್ಶನವಾಗುತ್ತಿತ್ತು. ಆದರೆ ಈಗ ಜೋಗದ ಸೌಂದರ್ಯ ನಿಧಾನವಾಗಿ ಮರುಕಳಿಸುತ್ತಿದೆ. ಜಲಪಾತದ ನೀರನ್ನು ಆಶ್ರಯಿಸಿದ್ದ ಜೀವ ಸಂಕುಲಗಳು‌, ಸರೀಸೃಪಗಳು ಹಾಗೂ ಜಲಚರಗಳಲ್ಲೂ ಹೊಸ ಚೈತನ್ಯ ಮೂಡಿದೆ. ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. 

ADVERTISEMENT

ಜೋಗದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಪ್ರವಾಸಿಗರು ಅತಿ ಹತ್ತಿರದಿಂದ ಜಲಪಾತದ ಜಲಸಿರಿಯ ವೈಭವ ಕಣ್ತುಂಬಿಕೊಳ್ಳಲು ಅನುವು ಮಾಡಿಕೊಡುವ ಸಲುವಾಗಿ ಬೃಹತ್ ವೀಕ್ಷಣಾ ಗೋಪುರಗಳು ತಲೆ ಎತ್ತುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.