ADVERTISEMENT

ಆರ್‌ಸಿಇಪಿ ವಿರೋಧಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 12:15 IST
Last Updated 25 ಅಕ್ಟೋಬರ್ 2019, 12:15 IST
ಅಡಿಕೆ ಬೆಳೆಗಾರರು, ಹಾಲು ಉತ್ಪಾದಕರಿಗೆ ಮಾರಕವಾಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‌ಸಿಇಪಿ) ಒಪ್ಪಂದ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಶಿವಮೊಗ್ಗದ ಎಂಆರ್‌ಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಅಡಿಕೆ ಬೆಳೆಗಾರರು, ಹಾಲು ಉತ್ಪಾದಕರಿಗೆ ಮಾರಕವಾಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‌ಸಿಇಪಿ) ಒಪ್ಪಂದ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಶಿವಮೊಗ್ಗದ ಎಂಆರ್‌ಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಅಡಿಕೆ ಬೆಳೆಗಾರರು, ಹಾಲು ಉತ್ಪಾದಕರಿಗೆ ಮಾರಕವಾಗಿರುವಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‌ಸಿಇಪಿ) ಒಪ್ಪಂದ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಎಂಆರ್‌ಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಒಪ್ಪಂದದಿಂದ ಪ್ರಮುಖವಾಗಿಹಾಲು ಉತ್ಪಾದಕರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಅಲ್ಲದೇ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.ಭಾರತದ ಜೀವವೈವಿಧ್ಯತೆ ಹಾಗೂ ಸಾಮೂಹಿಕ ಜ್ಞಾನದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈ ಒಪ್ಪಂದ ರೈತರ ಬದುಕಿಗೆ ಮಾರಕವಾಗಿದೆ ಎಂದು ದೂರಿದರು.

ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದದಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಅಮದು ಸುಂಕ ಶಾಶ್ವತವಾಗಿ ಶೂನ್ಯಕ್ಕೆ ಇಳಿಯುತ್ತದೆ. ಕೃಷಿ ಉತ್ಪನ್ನಗಳು ಆಮದು ಹೆಚ್ಚಾಗುತ್ತದೆ. ಇದರಿಂದ ಭಾರತದ ಲಕ್ಷಾಂತರ ಸಣ್ಣ ರೈತರು, ವಿಶೇಷವಾಗಿ ಹೈನುಗಾರಿಕೆ ಕ್ಷೇತ್ರ ಅಪಾಯಕ್ಕೆ ಒಳಗಾಗುತ್ತದೆ. ಬೀಜ ಕಂಪನಿಗಳು ಹೆಚ್ಚಿನ ಅಧಿಕಾರ ಪಡೆಯುತ್ತವೆ. ಈ ಒಪ್ಪಂದ ಕೂಡಲೇ ರದ್ದಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ನವೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆಯುವ ಶೃಂಗ ಸಭೆಯಲ್ಲಿ ವಿಶ್ವದ 16 ದೇಶಗಳು ಭಾಗವಹಿಸುತ್ತಿವೆ. ಸಂಸತ್‌ನಲ್ಲಿ ಚರ್ಚೆ ಮಾಡದೆ ಒಪ್ಪದಂದವನ್ನು ಒಪ್ಪಿಕೊಳ್ಳಬಾರದು. ಏಕೆಂದರೆ ಭಾರತದ ದೇಶೀಯ ಮಾರುಕಟ್ಟೆ ಸಂಪೂರ್ಣ ನಾಶವಾಗುವ ಈ ಒಪ್ಪಂದಕ್ಕೆ ರೈತರ ವಿರೋಧವಿದೆ ಎಂದರು.

ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್, ರೈತ ಮುಖಂಡರಾದ ಯಶವಂತ ರಾವ್ ಘೋರ್ಪಡೆ, ಡಿ.ವಿ. ವೀರೇಶ್, ಎಸ್.ಎಚ್. ಮಂಜುನಾಥ್, ಮೋಹನ್, ಎಚ್.ಕೆ. ಪರಮೇಶ್ವರಪ್ಪ, ಹಿರಿಯಣ್ಣಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.