ADVERTISEMENT

ಸಂವಿಧಾನ ಪುಸ್ತಕ ಹಿಡಿಯಲು ರಾಹುಲ್‌ಗೆ ನೈತಿಕತೆ ಇಲ್ಲ: ಎಸ್. ದತ್ತಾತ್ರಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:03 IST
Last Updated 27 ಜೂನ್ 2024, 16:03 IST
ಎಸ್.ದತ್ತಾತ್ರಿ
ಎಸ್.ದತ್ತಾತ್ರಿ   

ಶಿವಮೊಗ್ಗ: ‘ಸಂವಿಧಾನ ಪುಸ್ತಕ ಹಿಡಿಯಲು ಎಐಸಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷದವರಿಗೆ ನೈತಿಕ ಹಕ್ಕು ಇಲ್ಲ. ರಾಹುಲ್ ಅಜ್ಜಿ ಇಂದಿರಾಗಾಂಧಿ ತಮ್ಮ ಸ್ವಾರ್ಥಕ್ಕಾಗಿ ಅತೀ ಹೆಚ್ಚು ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್. ದತ್ತಾತ್ರಿ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ಸಂವಿಧಾನ ಪುಸ್ತಕ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ  ಪ್ರಮಾಣ ವಚನ ಸ್ವೀಕಾರ ಮಾಡುವಾಗ ಪದೇ ಪದೇ ಸಂವಿಧಾನ ಪುಸ್ತಕ ಎತ್ತಿ ತೋರಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದರು.

ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ರಾಹುಲ್ ಗಾಂಧಿ ಅಜ್ಜಿ ಇಂದಿರಾ 1975 ರ ಜೂನ್ 25 ರಂದು ಮಧ್ಯರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗದ ಕತ್ತು ಕೊಯ್ಯುವ ಕೆಲಸ ಮಾಡಲಾಗಿತ್ತು. ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿ ಅಭಿವ್ಯಕ್ತಿ ಸ್ವಾತಂತ್ರ‍್ಯ ಹರಣ ಮಾಡಿದ್ದರು ಎಂದರು.

ADVERTISEMENT

ಬಿಜೆಪಿಯೇತರ ಸರ್ಕಾರಗಳ ಅವಧಿಯಲ್ಲಿಯೇ ಹೆಚ್ಚು ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಇಂದಿರಾಗಾಂಧಿ ಸಂವಿಧಾನ ತಿದ್ದುಪಡಿ ಮಾಡಿ ತುರ್ತು ಪರಿಸ್ಥಿತಿ ಏರಿದ್ದಕ್ಕೆ ಮೊಮ್ಮಗ ರಾಹುಲ್ ಗಾಂಧಿ  ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
 
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶಿವರಾಜ್, ಹೃಷಿಕೇಶ ಪೈ, ರಮೇಶ್, ಶ್ರೀನಿವಾಸ ರೆಡ್ಡಿ, ಭವಾನಿರಾವ್ ಮೋರೆ, ಹರೀಶ್, ಮೂರ್ತಿ, ಲಿಂಗರಾಜ್, ವಿನ್ಸೆಂಟ್ ರೋಡ್ರಿಗಸ್, ರತ್ನಾಕರ ಶೆಣೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.