ADVERTISEMENT

ಬಿಜೆಪಿ ಪ್ರತಿಭಟನೆ ಹಾಸ್ಯಾಸ್ಪದ: ಎಂ. ರಮೇಶ್ ಶೆಟ್ಟಿ

ಕೇಂದ್ರ ಬೆಲೆ ಏರಿಸಿದಾಗ ಮೌನ ವಹಿಸಿರುವುದು ಏಕೆ?

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 16:24 IST
Last Updated 16 ಜೂನ್ 2024, 16:24 IST
ಎಂ.ರಮೇಶ್ ಶೆಟ್ಟಿ
ಎಂ.ರಮೇಶ್ ಶೆಟ್ಟಿ   

ಶಿವಮೊಗ್ಗ: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಏರಿಸಿದ್ದಕ್ಕೆ ರಾಜ್ಯ ಬಿಜೆಪಿ ಪ್ರತಿಭಟನೆಗೆ ಇಳಿದಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ವಕ್ತಾರ ಎಂ. ರಮೇಶ್ ಶೆಟ್ಟಿ ತಿಳಿಸಿದರು. 

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕ್ರಮವಾಗಿ ₹ 60 ಮತ್ತು ₹ 55 ಇತ್ತು. ಆದರೆ, ಬಿಜೆಪಿ ಸರ್ಕಾರ ಪ್ರತಿ ದಿನ 25 ರಿಂದ 30 ಪೈಸೆಯಂತೆ ಏರಿಕೆ ಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣು ಎರಚಿ ಅಂತಿಮವಾಗಿ ಪೆಟ್ರೋಲ್ ಲೀಟರ್‌ಗೆ ₹ 110  ಹಾಗೂ ಡೀಸೆಲ್ ಲೀಟರ್‌ಗೆ ₹ 98ರವರೆಗೂ ಏರಿಸಿದಾಗ ಕಣ್ಣು ಮುಚ್ಚಿ ಕುಳಿತ್ತಿದ್ದ ರಾಜ್ಯ ಬಿಜೆಪಿ ನಾಯಕರು ಈಗ ಕೇವಲ ₹ 3 ಏರಿಸಿದ್ದಕ್ಕೆ ಬೊಬ್ಬೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರಿಗೆ ಜನರ ಮೇಲೆ ಕಾಳಜಿ ಇದ್ದರೆ ಪ್ರತಿಭಟನೆ ಕೈಬಿಟ್ಟು, ಕೇಂದ್ರದ ಮೇಲೆ ಒತ್ತಡ ತಂದು ತೈಲ ಬೆಲೆ ಕಡಿತಕ್ಕೆ ಒತ್ತಾಯಿಸಿಲಿ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ, ತಿಂಗಳಿಗೆ ₹ 2,000 ಹಾಗೂ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ₹ 3,000 ನೀಡುತ್ತಿದ್ದು, ಸಂಪನ್ಮೂಲ ಸಂಗ್ರಹಣೆಗೆ ₹ 3 ಏರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಅಕ್ಷಮ್ಯ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.