ADVERTISEMENT

ಮಂಗನಕಾಯಿಲೆ ಆಯ್ತು; ಈಗ ಇಲಿಜ್ವರದ ಆತಂಕ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:01 IST
Last Updated 5 ಮಾರ್ಚ್ 2019, 20:01 IST

ಶಿವಮೊಗ್ಗ:ಮಂಗನ ಕಾಯಿಲೆಗೆ ತುತ್ತಾಗಿರುವ ಮಲೆನಾಡಿನಲ್ಲಿ ಇಲಿಜ್ವರವೂ ಹಬ್ಬುತ್ತಿದ್ದು, ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕು ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಸಿದೆ.

ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಇಲಿಜ್ವರ ಈ ಬಾರಿ ಮಲೆನಾಡಿಗೂ ದಾಳಿ ಇಟ್ಟಿದೆ. ಜನವರಿಯಿಂದ ಇಲ್ಲಿಯವರೆಗೆ ಮೂರು ತಾಲ್ಲೂಕುಗಳ 21 ಜನರಲ್ಲಿ ಜ್ವರ ಇರುವುದು ದೃಢಪಟ್ಟಿದೆ.

ರೋಗಪೀಡಿತ ಇಲಿಗಳು ಕಚ್ಚಿದರೆ, ಅವು ತಿಂದುಬಿಟ್ಟ ಹಣ್ಣು, ಆಹಾರ, ನೀರು ಸೇವಿಸಿದರೆ, ಅಂತಹ ಇಲಿಗಳ ಮೂತ್ರ ಸ್ಪರ್ಶಿಸಿದರೆ ಜ್ವರ ಹರಡುತ್ತದೆ. ಕೆಮ್ಮು, ವಾಂತಿ, ತಲೆ ನೋವು,ಜ್ವರ ಈ ಕಾಯಿಲೆಯ ಲಕ್ಷಗಳು. 24 ಗಂಟೆಗಿಂತ ಅಧಿಕ ಅವಧಿ ಜ್ವರ ಕಾಣಿಸಿಕೊಂಡರೆ ತಕ್ಷಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.