ಶರಾವತಿ ಕಣಿವೆಯಲ್ಲಿ ಈಗ ಮುಂಗಾರು ವೈಭವ. ಇಳೆ–ಮಳೆಯ ನಡುವೆ ಸುಂದರ ದೃಶ್ಯಕಾವ್ಯ. ಜಲಪಾತದ ಈ ದೃಶ್ಯ ಕಾವ್ಯಕ್ಕೆ ದೃಷ್ಟಿ ತೆಗೆಯುವಂತೆ ಆಗಾಗ ನೆಲ-ಮುಗಿಲಿಗೆ ಹರಡಿ ನಿಲ್ಲುತ್ತಿದೆ ಮಂಜಿನ ಪರದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯ ಭರ್ತಿಯ ಹಂತಕ್ಕೆ ತಲುಪಿದ್ದು, ಗುರುವಾರ ನದಿಗೆ 10 ಸಾವಿರ ಕ್ಯುಸೆಕ್ ನೀರು ಹರಿಸಲಾಯಿತು. ಶರಾವತಿ ಹರಿದು ಬರುತ್ತಿದ್ದಂತೆ, ಜೋಗದಲ್ಲಿ ಮೊದಲಿನ ವೈಭವ ಮನೆ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.