ADVERTISEMENT

ಹರಿಹರ | ಪ್ರಜಾವಾಣಿ ವರದಿ ಪರಿಣಾಮ: ಜೋಡಿ ರಸ್ತೆ ಕಸದ ರಾಶಿಗೆ ಸಿಕ್ಕಿತು ಮುಕ್ತಿ 

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 15:12 IST
Last Updated 1 ಜೂನ್ 2024, 15:12 IST
ಹರಿಹರ: ಹರಿಹರ ಹೊರವಲಯದ ದಾವಣಗೆರೆ ಮಾರ್ಗದ ಬೀರೂರು-ಸಮ್ಮಸಗಿ ಜೋಡಿ ರಸ್ತೆ ಬದಿ ರಾಶಿ, ರಾಶಿ ಬಿದ್ದಿದ್ದ ಕಸದ ರಾಶಿ.
ಹರಿಹರ: ಹರಿಹರ ಹೊರವಲಯದ ದಾವಣಗೆರೆ ಮಾರ್ಗದ ಬೀರೂರು-ಸಮ್ಮಸಗಿ ಜೋಡಿ ರಸ್ತೆ ಬದಿ ರಾಶಿ, ರಾಶಿ ಬಿದ್ದಿದ್ದ ಕಸದ ರಾಶಿ.   

ಹರಿಹರ: ಹೊರವಲಯದ ದಾವಣಗೆರೆ ಮಾರ್ಗದ ಬೀರೂರು– ಸಮ್ಮಸಗಿ ಜೋಡಿ ರಸ್ತೆ ಬದಿ ರಾಶಿ, ರಾಶಿ ಬಿದ್ದಿದ್ದ ಕಸದ ಗುಡ್ಡೆಯನ್ನು ನಗರಸಭೆಯಿಂದ ಸಾಗಣೆ ಮಾಡಲಾಗಿದೆ.

ಕಸದ ರಾಶಿಗೆ ಬೆಂಕಿ: ‘ಅಪಾಯಕ್ಕೆ ಆಹ್ವಾನ’ ಎಂಬ ಶೀರ್ಷಿಕೆಯಡಿ ಜ. 19ರಂದು ಹಾಗೂ ‘ಕಂಡಕಂಡಲ್ಲಿ ಔಷಧಿ ತ್ಯಾಜ್ಯ’ ಎಂಬ ಶೀರ್ಷಿಕೆಯಲ್ಲಿ ಮೇ 9ರಂದು ‘ಪ್ರಜಾವಾಣಿ’ಯಲ್ಲಿ ಸಮಗ್ರ ವರದಿ ಪ್ರಕಟಿಸಲಾಗಿತ್ತು.

ವರದಿಗಳನ್ನು ಗಮನಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಮೇ 13ರಂದು ನೋಟಿಸ್ ಜಾರಿ ಮಾಡಿದ್ದರು. ಇದರಿಂದ ಎಚ್ಚೆತ್ತ ನಗರಸಭೆ ಮೂರ‍್ನಾಲ್ಕು ದಿನಗಳಿಂದ ಕಸದ ಸಾಗಣೆ ಕಾರ್ಯ ಮಾಡಿದೆ.

ADVERTISEMENT

ಜೋಡಿ ರಸ್ತೆ ಮತ್ತು ರೈಲ್ವೆ ಹಳಿಗಳ ಮಧ್ಯದಲ್ಲಿ ಅಂದಾಜು 40 ಅಡಿಗಳ ಖಾಲಿ ಜಾಗವಿದೆ. ರೈಲ್ವೆ ಫ್ಲೈ ಓವರ್‌ನಿಂದ ಹಿಡಿದು 2ನೇ ರೈಲ್ವೆ ಗೇಟ್‌ವರೆಗೆ ಸುಮಾರು 3 ಕಿ.ಮೀ.ವರೆಗಿನ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ ಹಾಕಲಾಗಿತ್ತು.

ಮಣ್ಣಿನ ಜೊತೆ ಸೇರಿಕೊಳ್ಳುವ ಕಸವನ್ನು ಜೆಸಿಬಿಯಿಂದ ಸಮತಟ್ಟು ಮಾಡಿಸಿದ್ದು, ಉಳಿದ ಕಸವನ್ನು ನಗರಸಭೆ ಸಿಬ್ಬಂದಿ ಸಾಗಿಸಿದ್ದಾರೆ. ಕಸ ಸಾಗಣೆ ಮಾಡುವುದು ತಾತ್ಕಾಲಿಕ. ಇಲ್ಲಿ ಯಾರೂ ಕಸ ಹಾಕದಂತೆ ಶಾಶ್ವತ ಕಣ್ಗಾವಲು ವ್ಯವಸ್ಥೆ ಮಾಡುವುದು ಮುಖ್ಯ ಎಂದು ಸ್ಥಳೀಯರು ಒತ್ತಾಯಿಸುವರು.

ಹರಿಹರ: ಕಳೆದ ಮರ‍್ನಾಲ್ಕು ದಿನಗಳಿಂದ ನಗರಸಭೆಯಿಂದ ಜೆಸಿಬಿ ಮೂಲಕ ಸ್ವಚ್ಚತಾ ಕಾರ್ಯ ಮಾಡಿರುವುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.