ಕಾರ್ಗಲ್: ಶರಾವತಿ ಕಣಿವೆ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯ ರಭಸಕ್ಕೆ ಕಾರ್ಗಲ್ ಪಟ್ಟಣದ ಶರಾವತಿ ನದಿ ತೀರದಲ್ಲಿದ್ದ ಬೃಂದಾವನ ಡ್ರೈಯರ್ಸ್ ರೈಸ್‌ಮಿಲ್ ಭಾನುವಾರ ಧರೆಗುರುಳಿದೆ.
ಶನಿವಾರ ರಾತ್ರಿ ವೇಳೆಯಲ್ಲಿ ಗುಡುಗು ಸಿಡಿಲು ಸಹಿತ ನಿರಂತರವಾಗಿ ಸುರಿಯುತ್ತಿದ್ದ ಗಾಳಿ ಮಳೆಯ ರಭಸಕ್ಕೆ ಬೃಂದಾವನ ಡ್ರೈಯರ್ಸ್‍ನ 80 ಅಡಿ ಎತ್ತರದ ಗೋಡೆ ಸಂಪೂರ್ಣವಾಗಿ ಸೂರು ಸಹಿತ ಧರೆಗುರುಳಿದೆ.
ರೈಸ್‌ಮಿಲ್ ಒಳಭಾಗದಲ್ಲಿದ್ದ ಸಾವಿರಕ್ಕೂ ಅಧಿಕ ಭತ್ತದ ಮೂಟೆಗಳು ಮಳೆ ನೀರು ಪಾಲಾಗಿದ್ದು, ಯಂತ್ರೋಪಕರಣಗಳು, ಜನರೇಟರ್ ಕೊಠಡಿ ಸಹಿತ ಧರೆಗುರುಳಿದ್ದು, ₹ 1 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ರೈಸ್‌ಮಿಲ್ ಮಾಲೀಕ ವಿನೋದ ಸುಭಾಸ್ ಮಹಾಲೆ ತಿಳಿಸಿದ್ದಾರೆ.
ನೂರಾರು ಕಾರ್ಮಿಕರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಸಾಗರ ತಹಶೀಲ್ದಾರ್ಮಲ್ಲೇಶ್ ಬಿ.ಪೂಜಾರ್ ಮತ್ತು ಸಬ್ಇನ್‌ಸ್ಪೆಕ್ಟರ್ ತಿರುಮಲೇಶ್ ಭೇಟಿ ನೀಡಿ
ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮಾರ್ಗ ಸೂಚಿಗಳನ್ನು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.