ADVERTISEMENT

ಹೊಂಬುಜ: ಶರನ್ನವರಾತ್ರಿ ಉತ್ಸವ ಫಲಗಳ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 15:37 IST
Last Updated 6 ಅಕ್ಟೋಬರ್ 2024, 15:37 IST
ಹೊಂಬುಜ ಜೈನ ಮಠದಲ್ಲಿ ಭಾನುವಾರ ನವರಾತ್ರಿಯ ಅಂಗವಾಗಿ ಕೂಷ್ಮಾಂಡಿನಿ ದೇವಿಯ ಆರಾಧನಾ ಮಹೋತ್ಸವ ನಡೆಯಿತು
ಹೊಂಬುಜ ಜೈನ ಮಠದಲ್ಲಿ ಭಾನುವಾರ ನವರಾತ್ರಿಯ ಅಂಗವಾಗಿ ಕೂಷ್ಮಾಂಡಿನಿ ದೇವಿಯ ಆರಾಧನಾ ಮಹೋತ್ಸವ ನಡೆಯಿತು   

ರಿಪ್ಪನ್ ಪೇಟೆ: ಹೊಂಬುಜ ಜೈನ ಮಠದಲ್ಲಿ ಶರನ್ನವರಾತ್ರಿ ಉತ್ಸವದ 4ನೇ ದಿನದ ಅಂಗವಾಗಿ ಭಾನುವಾರ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಫಲಗಳನ್ನು ಸಮರ್ಪಿಸಿ, ಪೂಜಾ ವಿಧಿವಿಧಾನ ನೆರವೇರಿಸಲಾಯಿತು.

ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ ಅವರು ಭಕ್ತ ಸಮೂಹಕ್ಕೆ ಸಂದೇಶ ನೀಡಿದರು. ನಿಸರ್ಗದಲ್ಲಿ ಆಹಾರಕ್ಕಾಗಿ ಮತ್ತು ಔಷಧಿ ರೂಪದಲ್ಲಿ ಬಳಸುವ ನಾನಾ ವಿಧಗಳ ಫಲಗಳು ಉತ್ಕೃಷ್ಟವೂ, ಸ್ವಾದಿಷ್ಟವೂ ಆಗಿರುತ್ತವೆ. ದೇವಿಯ ಆರಾಧನೆಯಲ್ಲಿ ವಿವಿಧ ಫಲಗಳನ್ನು ಅರ್ಪಿಸುವುದು ನವರಾತ್ರಿಯ ಪೂಜಾ ವಿಧಿಗಳಲ್ಲಿ ವೈಶಿಷ್ಟ್ಯಪೂರ್ಣವೂ,  ಮಹತ್ವದ್ದೂ ಆಗಿದೆ’ ಎಂದರು.  

ಸಕಲ ವಾದ್ಯಗೊಷ್ಠಿಯೊಂದಿಗೆ ಕುಮದ್ವತಿ ತೀರ್ಥದಿಂದ ಅಗ್ರೋದಕವನ್ನು ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಜಿನಾಲಯಕ್ಕೆ ತಂದರು. ಪಾರ್ಶ್ವನಾಥ ಸ್ವಾಮಿ, ನೇಮಿನಾಥ ಸ್ವಾಮಿ, ಮಹಾವೀರ ಸ್ವಾಮಿ, ತ್ರಿಕೂಟ ಜಿನಾಲಯದ ಶಾಂತಿನಾಥ ಸ್ವಾಮಿ, ಬಾಹುಬಲಿ ಸ್ವಾಮಿ ಸನ್ನಿಧಿಯಲ್ಲಿ ಶ್ರೀಫಲ-ಪುಷ್ಪಗಳಿಂದ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. 

ADVERTISEMENT

ಕೂಷ್ಮಾಂಡಿನಿ ದೇವಿ, ಸರಸ್ವತಿ ದೇವಿ, ಕ್ಷೇತ್ರಪಾಲ ಹಾಗೂ ಶಾಸನ ದೇವತೆಗಳಿಗೆ ಆರಾಧನೆ ನಡೆಯಿತು. ರಾತ್ರಿ ಅಷ್ಟಾವಧಾನ ಉತ್ಸವ, ಪ್ರಸಾದ ವಿತರಣೆ ನೆರವೇರಿತು.

ಕ್ಷೇತ್ರದಲ್ಲಿ ವಿದ್ಯುತ್ ದೀಪಾಲಂಕಾರಗಳಿಂದ ಜಿನಮಂದಿರಗಳು ಕಂಗೊಳಿಸುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.