ರಿಪ್ಪನ್ ಪೇಟೆ: ಪಟ್ಟಣದ ವಿವಿಧೆಡೆ ಒಣಗಲು ಹಾಕಿದ್ದ 4 ಕ್ವಿಂಟಲ್ಗೂ ಅಧಿಕ ರಬ್ಬರ್ ಶೀಟ್ಗಳನ್ನು ಕಳ್ಳರು ಬುಧವಾರ ರಾತ್ರಿ ಕಳವು ಮಾಡಿದ್ದಾರೆ.
ಬೆಳಂದೂರು ಗ್ರಾಮದ ಬಿ.ಟಿ.ಪ್ರಕಾಶ್ ಮನೆಯಲ್ಲಿ 160 ಕೆ.ಜಿ, ಪುಟ್ಟಸ್ವಾಮಿಗೌಡ ಮನೆಯಲ್ಲಿ 150 ಕೆ.ಜಿ ಹಾಗೂ ತಳಲೆ ಜಾರ್ಜ್ ಮನೆಯಲ್ಲಿ 50 ಕೆ.ಜಿ ರಬ್ಬರ್ ಶೀಟ್ ಕದ್ದಿದ್ದಾರೆ. ಗವಟೂರು ಗ್ರಾಮದ ಅಲೆಕ್ಸ್ ಅವರ ಮನೆಯಿಂದಲೂ ರಬ್ಬರ್ ಶೀಟ್ ಕಳವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವುಗಳ ಮೌಲ್ಯ ಅಂದಾಜು ₹80,000 ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.