ಶಿವಮೊಗ್ಗ: ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಅರಣ್ಯ ವ್ಯಾಪ್ತಿಯ ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ಸಲಗವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆಹಿಡಿದು ಮಂಗಳವಾರ ಇಲ್ಲಿಯ ಸಕ್ರೆಬೈಲು ಆನೆ ಬಿಡಾರಕ್ಕೆ ತಂದಿದ್ದಾರೆ.
ಆನೆ ಆರೋಗ್ಯವಾಗಿದ್ದು ವಯಸ್ಸು ಅಂದಾಜು 20-22 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಬಿಡಾರದ ಗಜಗಳ ಸಂಖ್ಯೆ 25ಕ್ಕೆ ಏರಿದೆ.
ಗುರುಮರಡಿ ಹಾಗೂ ನಂದಿಹಳ್ಳಿ ಗ್ರಾಮದ ಗಡಿಯಲ್ಲಿದ್ದ ಆನೆಯನ್ನು ಸೆರೆಹಿಡಿಯಲು ದುಬಾರೆ ಹಾಗೂ ಮತ್ತಿಗೋಡು ಶಿಬಿರದಿಂದ ಅಭಿಮನ್ಯು, ಗೋಪಾಲ ಸ್ವಾಮಿ, ಸಕ್ರೆಬೈಲು ಬಿಡಾರದ ಬಾಲಣ್ಣ ಮತ್ತು ಸಾಗರ ಆನೆಗಳನ್ನು ಬಳಸಿಕೊಳ್ಳಲಾಗಿತ್ತು. ಜೋಗಿಮಟ್ಟಿ ಕಾಡಿನಲ್ಲಿ 30 ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದಿಂದ ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.