ಶಿವಮೊಗ್ಗ: ಇಲ್ಲಿನ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದ ಸಮೀಪ ಅನುಮಾನಾಸ್ಪದವಾಗಿ ಇಟ್ಟಿದ್ದ ಎರಡು ಕಬ್ಬಿಣದ ಬಾಕ್ಸ್ಗಳಲ್ಲಿ ಇಡಲಾಗಿದ್ದ ಬಿಳಿ ಬಣ್ಣದ ಪುಡಿ ಉಪ್ಪು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಬಾಕ್ಸ್ ಇಟ್ಟಿದ್ದ ಆರೋಪಿಗಳ ಪ್ರಾಥಮಿಕ ವಿಚಾರಣೆಯಲ್ಲಿ ಈ ಸಂಗತಿ ತಿಳಿದುಬಂದಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಿಂದ ಭಾನುವಾರ ರಾತ್ರಿ ಬಾಂಬ್ ವಿಲೇವಾರಿ ತಂಡ ಬಂದಿದ್ದು, ಸೋಮವಾರ ಬೆಳಗಿನ ಜಾವ 4 ಗಂಟೆ ವೇಳೆಗೆ ಬಾಕ್ದ್ಗಳ ಬೀಗ ಸ್ಫೋಟಿಸಿ ಅದನ್ನು ತೆಗೆದಾಗ ಕೆಲವು ನಿರುಪಯುಕ್ತ ವಸ್ತುಗಳು ಹಾಗೂ ಬಿಳಿ ಪುಡಿ ಪತ್ತೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.