ಭದ್ರಾವತಿ: ನಗರದಲ್ಲಿ ಶನಿವಾರ ಕ್ರೈಸ್ತ ಸಮುದಾಯದವರು ಸಮಾಧಿ ಹಬ್ಬ ಆಚರಿಸಿದರು.
ಬೈಪಾಸ್ ರಸ್ತೆ ಬಳಿಯ ಕ್ರೈಸ್ತರ ರುದ್ರಭೂಮಿಯಲ್ಲಿ ಸೇರಿದ ಸಮುದಾಯದವರು ಗತಿಸಿದ ಕುಟುಂಬದ ಸದಸ್ಯರಿಗೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿ–ವಿಧಾನ ಪೂರೈಸಿದರು.
ವಿಶ್ವ ಕ್ಯಾಥೋಲಿಕ್ ಧರ್ಮ ಸಭೆಯು ನ.2ರಂದು ಮೃತರ ದಿನವನ್ನಾಗಿ ಆಚರಿಸುತ್ತದೆ. ಇದರಿಂದ ಅಂಗವಾಗಿ ಇಲ್ಲಿನ ಕ್ರೈಸ್ತ ಸಮುದಾಯದವರು ಸಮಾಧಿಗಳ ಮೇಲೆ ಬೆಳೆದಿರುವ ಗಿಡಗಳನ್ನು ಸ್ವಚ್ಛಗೊಳಿಸಿ, ಬಣ್ಣಗಳನ್ನು ಹಚ್ಚಿ, ಹೂವಿನಿಂದ ಅಲಂಕರಿಸಿ, ಸಮಾಧಿಗಳ ಮೇಲೆ ಮೊಂಬತ್ತಿಗಳನ್ನು ಹಚ್ಚಿ ಪ್ರಾರ್ಥಿಸಿದರು.
ಹಳೇ ನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮಗುರು ಫಾದರ್ ಸ್ಟೀವನ್ ಡೇಸಾ, ನ್ಯೂಟೌನ್‌ನ ಅಮಲೋದ್ಭವಿ ಮಾತೆ ಧರ್ಮ ಕೇಂದ್ರದ ಫಾದರ್ ಲ್ಯಾನ್ಸಿ ಡಿಸೋಜ, ಕಾಗದ ನಗರದ ಸೈಂಟ್ ಜೋಸೆಫ್ ದೇವಾಲಯದ ಫಾದರ್ ಕ್ರಿಸ್ತ ರಾಜ್, ಹಿರಿಯೂರು ಧರ್ಮ ಕೇಂದ್ರದ ಫಾದರ್ ಸಂತೋಷ್ ಪರೇರ ಸೇರಿದಂತೆ ನಗರದ ಧರ್ಮ ಕೇಂದ್ರದ ಗುರುಗಳು, ಧರ್ಮ ಭಗಿನಿಯರು, ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.