ADVERTISEMENT

ಹೊಳೆಹೊನ್ನೂರು | ಶಾಲೆ ಎದುರಿನ ಮದ್ಯ ಮಾರಾಟ ಶೆಡ್‌ ತೆರವು

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:47 IST
Last Updated 29 ಜೂನ್ 2024, 15:47 IST
ಹೊಳೆಹೊನ್ನೂರು ಸಮೀಪದ ಹೊಳಲೂರು ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದ್ಯ ಮಾರಾಟದ ಶೆಡ್ ಅನ್ನು ಶನಿವಾರ ತೆರವುಗೊಳಿಸಲಾಯಿತು
ಹೊಳೆಹೊನ್ನೂರು ಸಮೀಪದ ಹೊಳಲೂರು ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದ್ಯ ಮಾರಾಟದ ಶೆಡ್ ಅನ್ನು ಶನಿವಾರ ತೆರವುಗೊಳಿಸಲಾಯಿತು   

ಹೊಳೆಹೊನ್ನೂರು: ಸಮೀಪದ ಹೊಳಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರು ಅಕ್ರಮವಾಗಿ ನಿರ್ಮಿಸಿದ್ದ ಮದ್ಯ ಮಾರಾಟದ ಶೆಡ್‌ಗಳನ್ನು ಗ್ರಾಮಾಡಳಿತವು ಪೊಲೀಸ್‌ ಸಿಬ್ಬಂದಿ ನೇತೃತ್ವದಲ್ಲಿ ಶನಿವಾರ ತೆರವುಗೊಳಿಸಿದೆ.

ಮದ್ಯ ಮಾರಾಟದ ಶೆಡ್‌ಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಹಲವು ಸಲ ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಮಸ್ಯೆ ಕುರಿತು ‘ಪ್ರಜಾವಾಣಿ’ಯಲ್ಲಿ ‘ಸರ್ಕಾರಿ ಶಾಲೆ ಎದುರೇ ಮದ್ಯ ಮಾರಾಟ’ ಶೀರ್ಷಿಕೆ ಅಡಿ ಶುಕ್ರವಾರ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತೆಕೊಂಡ ಅಧಿಕಾರಿಗಳು ಶೆಡ್‌ಗಳನ್ನು ತೆರವುಗೊಳಿಸಿದ್ದಾರೆ. ಸಾರ್ವಜನಿಕರು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಶಾಲೆಯಿಂದ 100 ಮೀ. ಅಂತರದೊಳಗೆ ಮದ್ಯ, ಗುಟ್ಕಾ ಮಾರಾಟ ಮಾಡುವಂತಿಲ್ಲ. ಮಾಂಸದ ಅಂಗಡಿ ತೆರೆಯುವಂತಿಲ್ಲ ಎಂಬ ನಿಯಮವನ್ನು ಉಲ್ಲಂಘಿಸಿ ಮದ್ಯದ ಅಂಗಡಿಗಳನ್ನು ತೆರೆಯಲಾಗಿತ್ತು. ವಿಶೇಷ ವರದಿ ಬಳಿಕ ಜಿಲ್ಲಾ ಆಡಳಿತ ಸೂಚನೆ ಮೇರೆಗೆ ಗ್ರಾಮ ಆಡಳಿತವು ಈ ಕ್ರಮ ಕೈಗೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.