ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕೆರೋಡಿ ಸತ್ತಮುತ್ತಲಿನ ಗ್ರಾಮಗಳ ಅಡಿಕೆ ತೋಟಗಳಲ್ಲಿ ಕಂಡುಬಂದ ಕೀಟಗಳಾದ ಮಿಡತೆ (ಮರುಭೂಮಿ ಮಿಡತೆ ಅಲ್ಲ) ಹಾಗೂ ಟೈಗರ್ ಬೀಟಲ್ ಜಾತಿಗೆ ಸೇರಿದ ಹುಳುಗಳು ಕಾಣಿಸಿಕೊಂಡಿವೆ.
ಈ ಕೀಟಗಳು ಅಡಿಕೆ ಬೆಳೆಗೆ ಯಾವುದೆ ಹಾನಿ ಮಾಡುವುದಿಲ್ಲ. ಟೈಗರ್ ಬೀಟಲ್ ಪರಭಕ್ಷಕ ಕೀಟ. ಅದು ಬೇರೆ ಕೀಟಗಳನ್ನು ತಿಂದು ಬದುಕುತ್ತದೆ. ರೈತರಿಗೆ ಈ ಕೀಟ ಉಪಯುಕ್ತ. ಬೆಳೆಗಳಿಗೆ ಹಾನಿ ಮಾಡುವುದಿಲ್ಲ ಎಂದು ನವುಲೆಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ತಿಳಿಸಿದೆ.
ಕುಲಪತಿ ಡಾ.ಎಂ.ಕೆ. ನಾಯ್ಕ ಅವರ ಸೂಚನೆ ಮೇಲೆ ಕೆರೋಡಿ ಹಾಗೂ ಸುತ್ತಲ ಗ್ರಾಮಗಳ ತೋಟಗಳಿಗೆ ಸೋಮವಾರ ವಿಜ್ಞಾನಿಗಳಾದ ಡಾ.ಎಂ.ರವಿಕುಮಾರ್, ಡಾ. ನಾಗರಾಜಪ್ಪ ಅಡಿವಪ್ಪರ್, ಡಾ.ಶರಣಬಸಪ್ಪ ದೇಶ್‌ಮುಖ್, ರೇವತಿ, ಆಡಳಿತ ಮಂಡಳಿ ಸದಸ್ಯರಾದ ರಮೇಶ್ ಹೆಗಡೆ, ತೀರ್ಥಹಳ್ಳಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿದ್ದಲಿಂಗೇಶ್ ಕೀಳಗಳ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.