ADVERTISEMENT

ಶಿವಮೊಗ್ಗ | ಶಿಕ್ಷಕರ ವರ್ಗಾವಣೆ ಕರಡು ನಿಯಮಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 10:08 IST
Last Updated 19 ಜೂನ್ 2020, 10:08 IST
ಶಿವಮೊಗ್ಗದಲ್ಲಿ ಶುಕ್ರವಾರ ಕರವೇ ಯುವಸೇನೆ ಕಾರ್ಯಕರ್ತರು ಶಿಕ್ಷಕರ ವರ್ಗಾವಣೆ ಕರಡು ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಕರವೇ ಯುವಸೇನೆ ಕಾರ್ಯಕರ್ತರು ಶಿಕ್ಷಕರ ವರ್ಗಾವಣೆ ಕರಡು ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಶಿಕ್ಷಕರ ವರ್ಗಾವಣೆ ಕರಡು ನಿಯಮ ವಿರೋಧಿಸಿ ಕರ್ನಾಟಕರಕ್ಷಣಾ ವೇದಿಕೆ ಯುವ ಸೇನೆಕಾರ್ಯಕರ್ತರು ಶುಕ್ರವಾರಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸರ್ಕಾರಶಿಕ್ಷಕರಿಗೆ ನಿಯಮ ರೂಪಿಸುವುದಕ್ಕಿಂತ ಮುಂಚಿತವಾಗಿ ಶಿಕ್ಷಣ ತಜ್ಞರ ಜತೆಸಮಾಲೋಚನೆ ಮಾಡಬೇಕಿತ್ತು.ಶಿಕ್ಷಕರಿಗೆ ಅನುಕೂಲವಾದ ನಿಯಮಗಳನ್ನು ರೂಪಿಸದೇಶಿಕ್ಷಣ ಸ್ನೇಹಿ ಹೆಸರಿನಲ್ಲಿ ವರ್ಗಾವಣೆಗೆ ಅವಕಾಶಕಲ್ಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಸ್ಪರ ವರ್ಗಾವಣೆಯಲ್ಲಿನಅವಕಾಶಕ್ಕೂ ಇಲಾಖೆ ಕತ್ತರಿ ಪ್ರಯೋಗ ಮಾಡಿದೆ. ಶಿಕ್ಷಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಪರಸ್ಪರ ವರ್ಗಾವಣೆಯಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶೈಕ್ಷಣಿಕ ಪ್ರಗತಿ, ಶಾಲಾ ಫಲಿತಾಂಶಕ್ಕೆ ತೊಂದರೆಯಾಗುವುದಿಲ್ಲ. ಹಣದ ಆಮಿಷ ಇರುತ್ತದೆ ಎಂಬತಪ್ಪು ತಿಳಿವಳಿಕೆ ಇದೆ.ಯಾರೋ ಒಬ್ಬರು ಮಾಡಿದತಪ್ಪಿಗೆ ಇಡೀ ಶಿಕ್ಷಕ ಸಮುದಾಯಕ್ಕೆ ತೊಂದರೆಯಾಗುವ ನಿಯಮ ರೂಪಿಸುವುದು ಸರಿಯಲ್ಲ.ಪರಸ್ಪರ ವರ್ಗಾವಣೆಒಮ್ಮೆ ಮಾತ್ರ ಎಂಬ ನಿಯಮಕ್ಕೆ ತಿದ್ದುಪಡಿತರಬೇಕು. ಮುಕ್ತ ಅವಕಾಶ ಕೊಡಬೇಕು ಎಂದು ದೂರಿದರು.

ADVERTISEMENT

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಹರೀಶ್, ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್‌ಕುಮಾರ್, ಎಸ್.ಬಿ.ಶಿವಕುಮಾರ್, ನಾಗರಾಜ್, ಪ್ರೀತಮ್, ತ್ಯಾಗರಾಜ್, ಪರಶುರಾಮ, ಎಸ್.ಹೇಮಂತ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.