ADVERTISEMENT

ಶಿವಮೊಗ್ಗ | ಚೋರ್ ಬಜಾರ್‌ನಲ್ಲಿ ಅಗ್ನಿ ಅವಘಡ: ಏಳು ಬಟ್ಟೆ ಅಂಗಡಿ ಭಸ್ಮ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 18:29 IST
Last Updated 1 ಜುಲೈ 2024, 18:29 IST
ಬೆಂಕಿ ಅವಘಡದಲ್ಲಿ ಸುಟ್ಟು ಹೋಗಿರುವ ಬಟ್ಟೆ ಹಾಗೂ ಇತರ ವಸ್ತುಗಳು 
ಬೆಂಕಿ ಅವಘಡದಲ್ಲಿ ಸುಟ್ಟು ಹೋಗಿರುವ ಬಟ್ಟೆ ಹಾಗೂ ಇತರ ವಸ್ತುಗಳು    

ಶಿವಮೊಗ್ಗ: ಇಲ್ಲಿನ ಗಾಂಧಿ ಬಜಾರ್‌ನ ಬಟ್ಟೆ ಅಂಗಡಿಗಳ ಸಂಕೀರ್ಣ ಚೋರ್ ಬಜಾರ್‌ನಲ್ಲಿ ಸೋಮವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ.

ಬೆಂಕಿಯಿಂದ ಏಳು ಬಟ್ಟೆ ಅಂಗಡಿಗಳು ಸುಟ್ಟು ಹೋಗಿವೆ. ಸಿದ್ಧ ಉಡುಪುಗಳ ಮಾರಾಟದ ಮಾರುಕಟ್ಟೆ ಇದಾಗಿದೆ. ಅಂಗಡಿಗಳು ಒತ್ತೊತ್ತಾಗಿ ಇರುವುದರಿಂದ ಹಾನಿಯ ಪ್ರಮಾಣ ಹೆಚ್ಚಾಗಿದೆ.

ವಿಷಯ ತಿಳಿದು ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ತೆರಳಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. 

ADVERTISEMENT

ವಾಹನ ತೆರಳಲು ತೊಂದರೆ: ಚೋರ್ ಬಜಾರ್‌ನ ರಸ್ತೆ ಇಕ್ಕಟ್ಟಾಗಿದೆ. ಜೊತೆಗೆ ಒತ್ತುವರಿ ಕೂಡ ಆಗಿದೆ. ಹೀಗಾಗಿ, ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕೊಂಡೊಯ್ಯಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅಗ್ನಿ ಅವಘಡ ರಾತ್ರಿ ಆಗಿರುವುದರಿಂದ ಗ್ರಾಹಕರು ಇಲ್ಲದೇ ಜೀವಹಾನಿ ತಪ್ಪಿದೆ ಎಂದು ತಿಳಿದುಬಂದಿದೆ.

‘ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಪರಿಶೀಲನೆ ನಡೆಸುತ್ತಿದ್ದೇವೆ. ಬೆಂಕಿ ಅವಘಡಕ್ಕೆ ನೈಜ ಕಾರಣ ಹಾಗೂ ಹಾನಿಯ ಪ್ರಮಾಣ ಅಂದಾಜು ಮಾಡಬೇಕಿದೆ’ ಎಂದು ಶಿವಮೊಗ್ಗ ಅಗ್ನಿಶಾಮಕ ದಳದ ಅಧಿಕಾರಿ ನರೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.