ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ಒಟ್ಟು 66 ನಿರ್ದೇಶಕ ಸ್ಥಾನಗಳ ಪೈಕಿ 28 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದು ಸಂಜೆ ಹೊತ್ತಿಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಯಿತು.
ಜಿಲ್ಲಾ ಶಾಖೆಯ 66 ನಿರ್ದೇಶಕರ ಸ್ಥಾನಗಳಿಗೆ 2024–29ನೇ ಅವಧಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈಗಾಗಲೇ 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಆಯ್ಕೆಯಾದವರ ವಿವರ:
ಬಿ.ಗಿರೀಶ್ (ಕೃಷಿ ಇಲಾಖೆ ತಾಂತ್ರಿಕೇತರ ವಿಭಾಗ), ಜಿ.ಎಚ್. ಸತ್ಯನಾರಾಯಣ (ಕಂದಾಯ ಇಲಾಖೆ), ಪಿ.ಎನ್.ದೀಪಕ್ (ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ), ಎಚ್.ಕಿರಣ್ (ಜಿ.ಪಂ.), ಜಿ.ಪ್ರವೀಣ್ ಕುಮಾರ್ (ತಾ.ಪಂ.), ಮಧುಸೂದನ್ (ಅಬಕಾರಿ ಇಲಾಖೆ), ಕೊಟ್ರೇಶ್ (ಸಮಾಜ ಕಲ್ಯಾಣ ಇಲಾಖೆ), ವಿ.ಅನಿತಾ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ), ರಂಗನಾಥ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ), ಎಸ್.ಜಿ.ಸತ್ಯಭಾಮಾ (ಮೀನುಗಾರಿಕೆ ಇಲಾಖೆ), ರಾಜು ಲಿಂಬು ಚೌಹಾಣ್ (ಅರಣ್ಯ ಇಲಾಖೆ), ಡಾ.ಗುಡದಪ್ಪ ಕಸಬಿ (ಆರೋಗ್ಯ ಇಲಾಖೆ), ಡಾ.ಸಿ.ಎ.ಹಿರೇಮಠ್ (ಆಯುಷ್ ಇಲಾಖೆ), ಪಿ.ಎಲ್.ಮಹೇಶ್ (ಇಎಸ್‌ಐ), ಎಸ್.ವೈ.ರಮೇಶ್ (ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ), ಕೆ.ಎಚ್.ಮಹೇಶ್ (ಗ್ರಂಥಾಲಯ ಇಲಾಖೆ), ಲಿಂಗಪ್ಪ ಮತ್ತು ಧರ್ಮಪ್ಪ (ಪ್ರೌಢಶಾಲಾ ವಿಭಾಗ), ಡಿ.ಟಿ.ಶಶಿಧರ (ಪದವಿಪೂರ್ವ ಶಿಕ್ಷಣ), ಧನ್ಯಕುಮಾರ್ (ಪ್ರಥಮ ದರ್ಜೆ ಕಾಲೇಜು), ಜಿ.ಹನುಮಂತಪ್ಪ (ಮಹಿಳಾ ಪಾಲಿಟೆಕ್ನಿಕ್), ವಿ.ಬಿ.ಅಣ್ಣಪ್ಪ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ), ವೈ.ರವಿಕಿರಣ್ (ಗಣಿ ಮತ್ತು ಭೂವಿಜ್ಞಾನ), ಚನ್ನಕೇಶವಮೂರ್ತಿ (ಭೂಮಾಪನ ಮತ್ತು ಕಂದಾಯ ಇಲಾಖೆ), ಸುಬ್ರಹ್ಮಣ್ಯ ಜಾಧವ್ (ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ), ವಿಜಯ್ ಅಂಟೋನಿ ಸಗಾಯ್, ಟಿ.ಜಿ.ಅಶೋಕ್ ಹಾಗೂ ಕೆ.ನರಸಿಂಹ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ).
‘ಅವಿರೋಧವಾಗಿ ಆಯ್ಕೆಯಾದವರ ಜೊತೆಗೆ 28 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲೂ ನಮ್ಮ ಬಣದವರೇ ಮೇಲುಗೈ ಸಾಧಿಸಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದ ಸಂಘದ ಹಾಲಿ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ಮಾಡಿದರು.
‘ಹಿಂದಿನ ಅವಧಿಯ ರೀತಿ ಮುಂದೆಯೂ ಸಂಘದಿಂದ ಜಿಲ್ಲೆಯಲ್ಲಿ ನೌಕರರ ಪರ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಾಗುವುದು. ಅವರ ಹಿತಕ್ಕೆ ಶ್ರಮಿಸುವೆ’ ಎಂದು ಷಡಾಕ್ಷರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.