ADVERTISEMENT

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ: ಮರವೇರಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 16:03 IST
Last Updated 20 ನವೆಂಬರ್ 2024, 16:03 IST
ಹೊಸನಗರ ತಾಲ್ಲೂಕು ನಗರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಖಂಡಿಸಿ ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ್ ಶೆಟ್ಟಿ ಮಂಗಳವಾರ ಮರ ಏರಿ ಪ್ರತಿಭಟನೆ ನಡೆಸಿದರು
ಹೊಸನಗರ ತಾಲ್ಲೂಕು ನಗರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಖಂಡಿಸಿ ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ್ ಶೆಟ್ಟಿ ಮಂಗಳವಾರ ಮರ ಏರಿ ಪ್ರತಿಭಟನೆ ನಡೆಸಿದರು   

ಹೊಸನಗರ: ತಾಲ್ಲೂಕಿನ ನಗರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಅವ್ಯವಸ್ಥೆ ಖಂಡಿಸಿ ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ ಶೆಟ್ಟಿ ಅವರು ಮಂಗಳವಾರ ಮರ ಏರಿ ‌ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ. ಇದರಿಂದ ಜನರು ತೊಂದರೆ ಎದುರಿಸುವಂತಾಗಿದೆ. ಆಸ್ಪತ್ರೆಯಲ್ಲಿ ಅವ್ಯವಸ್ಥೆ ಹೆಚ್ಚಿದೆ. ಕೂಡಲೇ ಸರಿಪಡಿಸಬೇಕು. ಡಿಎಚ್‌ಒ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಬಂದ ಡಿಎಚ್ಒ ಡಾ.ನಟರಾಜ್, ಟಿಎಚ್ಒ ಡಾ. ಸುರೇಶ ನಾಯ್ಕ ಕರುಣಾಕರಶೆಟ್ಟಿ ಅವರನ್ನು ಮರದಿಂದ ಕೆಳಗಿಳಿಯುವಂತೆ ಮನವಿ ಮಾಡಿದರು.

ADVERTISEMENT

‘ವೈದ್ಯರ ಕೊರತೆ ನೀಗಿಸಲಾಗುವುದು, ಪೂರ್ಣಾವಧಿಯ ಪ್ರಯೋಗಾಲಯ ಸಿಬ್ಬಂದಿಯನ್ನೂ ನೇಮಕ ಮಾಡಲಾಗುವುದು’ ಎಂದು ಡಿಎಚ್‌ಒ ಭರವಸೆ ನೀಡಿದರು. ಬಳಿಕ ಕರುಣಾಕರ ಶೆಟ್ಟಿ ಪ್ರತಿಭಟನೆ ಕೈಬಿಟ್ಟರು.

ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್, ಹಿಲ್ಕುಂಜಿ ಕುಮಾರ್, ಕಿಶೋರ್, ಗುರು, ವಿಜಯ್ ಬೆಂಜಮಿನ್ ಡಿಸೋಜ, ಅಯೂಬ್ ಖಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.