ADVERTISEMENT

ಸುಬ್ಬಯ್ಯ ಆಸ್ಪತ್ರೆ ಸಂಸ್ಥಾಪಕ ಟಿ.ಸುಬ್ಬರಾಮಯ್ಯ ನಿಧನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 6:31 IST
Last Updated 5 ನವೆಂಬರ್ 2024, 6:31 IST
<div class="paragraphs"><p>ಟಿ.ಸುಬ್ಬರಾಮಯ್ಯ</p></div>

ಟಿ.ಸುಬ್ಬರಾಮಯ್ಯ

   

ಶಿವಮೊಗ್ಗ: ಇಲ್ಲಿನ ಸುಬ್ಬಯ್ಯ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಟಿ.ಸುಬ್ಬರಾಮಯ್ಯ (85) ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಬೆಳಗಿನ ಜಾವ ನಿಧನರಾದರು. ಅವರಿಗೆ ಪುತ್ರ (ವೈದ್ಯ ಡಾ.ನಾಗೇಂದ್ರ) ಇದ್ದಾರೆ.

ಮೃತರ ಅಂತ್ಯಕ್ರಿಯೆ ಮಧ್ಯಾಹ್ನ ಇಲ್ಲಿನ ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ನೆರವೇರಲಿದೆ.

ADVERTISEMENT

ಮೂಲತಃ ಕೃಷಿಕರಾದ ಸುಬ್ಬರಾಮಯ್ಯ ಶಿವಮೊಗ್ಗದ ಗುರುಪುರದಲ್ಲಿ 2003 ರಲ್ಲಿ ತಡಿಕೇಲ ಸುಬ್ಬಯ್ಯ ಟ್ರಸ್ಟ್ ಅಡಿ ಸುಬ್ಬಯ್ಯ ಆಸ್ಪತ್ರೆ ನಂತರ ಮೆಡಿಕಲ್ ಕಾಲೇಜು ಆರಂಭಿಸಿದ್ದರು. ಮುಂದೆ ಶಿವನೊಗ್ಗ ನಗರದಲ್ಲಿ ಮ್ಯಾಕ್ಸ್ ಮತ್ತು ಭರತ್ ಹೆಸರಿನ‌ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳ ಆರಂಭಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.