ADVERTISEMENT

ಕುಂಸಿ | ಕೋಳಿ ತ್ಯಾಜ್ಯದ ದುರ್ವಾಸನೆ, ಕುಡುಕರ ಹಾವಳಿ

ಕುಂಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರ ಪಾಡು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 7:12 IST
Last Updated 13 ಏಪ್ರಿಲ್ 2024, 7:12 IST
ಕುಂಸಿಯಿಂದ ಹಾರನಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಕೋಳಿ ಕಸದ ತ್ಯಾಜ್ಯವನ್ನು ಹಾಕಿರುವುದು
ಕುಂಸಿಯಿಂದ ಹಾರನಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಕೋಳಿ ಕಸದ ತ್ಯಾಜ್ಯವನ್ನು ಹಾಕಿರುವುದು   

ಕುಂಸಿ: ಕೋಳಿ ತ್ಯಾಜ್ಯ ಸುರಿಯುವುದರಿಂದ ಹರಿಡಿರುವ ದುರ್ವಾಸನೆ ಒಂದೆಡೆಯಾದರೆ, ದಾರಿಹೋಕರಿಗೆ ಮದ್ಯವ್ಯಸನಿಗಳ ಕಾಟ ಮತ್ತೊಂದೆಡೆ. ಇದು ಕುಂಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರ ಪಾಡು. 

ಕುಂಸಿ ಮುಖ್ಯರಸ್ತೆಯಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರತಿನಿತ್ಯ ಹಾರನಹಳ್ಳಿ, ಹುಬ್ಬನಹಳ್ಳಿ, ಚಾಮೇನಹಳ್ಳಿಗೆ ಹೋಗಬೇಕಾದರೆ ಕೋಳಿ ತ್ಯಾಜ್ಯದ ದುರ್ವಾಸನೆಯನ್ನು ಸಹಿಸಿಕೊಂಡೇ ಮುಂದೆ ಸಾಗಬೇಕಿದೆ. ರಸ್ತೆಬದಿಯಲ್ಲಿ ಮದ್ಯದಂಗಡಿ ಇದ್ದು, ‌ಮದ್ಯದ ಬಾಟಲಿಗಳನ್ನು ನಡು ರಸ್ತೆಯಲ್ಲಿಯೇ ಹೊಡೆದು ಹಾಕಲಾಗುತ್ತಿದೆ. ಜತೆಗೆ ಕುಡುಕರ ಕಿರಿಕಿರಿಯನ್ನು ಎದುರಿಸಿಯೇ ಜನರು ಮುಂದೆ ಸಾಗಬೇಕಿದೆ.

ಪಂಚಾಯಿತಿ ವತಿಯಿಂದ ಕಸದ ವಿಲೇವಾರಿಗಾಗಿ ವಾಹನವನ್ನು ನೀಡಿದ್ದಾರೆ. ಎಲ್ಲೆಂದರಲ್ಲಿ ಕಸವನ್ನು ಎಸೆಯದೆ ಕಸದ ವಾಹನಕ್ಕೆ ಹಾಕಿ ಎಂದು ಸಾಕಷ್ಟು ಬಾರಿ ತಿಳಿಸಿದ್ದರೂ, ಕಸದ ರಾಶಿಯನ್ನು ರಸ್ತೆಯಲ್ಲಿಯೇ ಹಾಕುತ್ತಿರುವುದು ಅಕ್ಕಪಕ್ಕದ ಹಳ್ಳಿಗರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಕೋಳಿ ತ್ಯಾಜ್ಯ ಎಸೆಯುವುದರಿಂದ ಅದನ್ನು ತಿನ್ನಲು ಬರುವ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳು ಓಡಾಡುವ ಜನರು ಮತ್ತು ಜಾನುವಾರುಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಎರಗುವ ಘಟನೆಗಳೂ ನಡೆದಿವೆ. 

ಇದರಿಂದ ಬೇಸತ್ತ ಕುಂಸಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 

ರಸ್ತೆಯ ಪಕ್ಕದಲ್ಲಿಯೇ ಇರುವ ಮದ್ಯದ ಅಂಗಡಿ
ಚಂದ್ರಶೇಖರ್
ಗುಡದಯ್ಯ

ಮದ್ಯದಂಗಡಿ ಪಕ್ಕದಲ್ಲಿಯೇ ನಮ್ಮ ಜಮೀನು ಇದ್ದು ಪ್ರತಿನಿತ್ಯ ಕುಡುಕರ ಹಾವಳಿಯಿಂದ ಸಾಕಾಗಿದೆ. ಕುಡಿದು ಎಸೆಯುವ ಬಾಟಲಿಗಳನ್ನು ದಿನವೂ ಹೆಕ್ಕಿ ತೆಗೆಯುವುದೇ ಕೆಲಸವಾಗಿದೆ

–ಚಂದ್ರಶೇಖರ್ ರೈತ

ದುರ್ವಾಸನೆ ಮತ್ತು ಕುಡುಕರ ಹಾವಳಿಯಿಂದಾಗಿ ಕುಂಸಿ ಕಾಲೇಜಿಗೆ ಬರಲು ಮತ್ತು ಪ್ರವೇಶ ಪಡೆಯಲು ಹಾರನಹಳ್ಳಿ ಚಾಮೇನಹಳ್ಳಿ ಮತ್ತು ಹುಬ್ಬನಹಳ್ಳಿಯ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.

–ಅಧಿಕಾರಿಗಳು ಗಮನಹರಿಸಲಿ ಗುಡದಯ್ಯ ಉಪಾಧ್ಯಕ್ಷ ಕಾಲೇಜು ಅಭಿವೃದ್ಧಿ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.