ADVERTISEMENT

ಕಿರುಚಿತ್ರ ಸ್ಪರ್ಧೆ: ಅರ್ಜಿ ಸಲ್ಲಿಕೆಗೆ ನ. 5 ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 12:47 IST
Last Updated 17 ಅಕ್ಟೋಬರ್ 2018, 12:47 IST

ಶಿವಮೊಗ್ಗ: ರೋಟರಿ ಕ್ಲಬ್ (ಜಿಲ್ಲೆ 3182), ಅಂಬೆಗಾಲು, ಬೆಳ್ಳಿ ಮಂಡಲ ವತಿಯಿಂದ ರಸ್ತೆ ಸುರಕ್ಷತೆ ಕುರಿತು ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.ಕಿರುಚಿತ್ರಗಳನ್ನು ಸಲ್ಲಿಸಲು ನ. 5 ಕೊನೆಯ ದಿನ.

4 ವಿಭಾಗಗಳಲ್ಲಿ ಸ್ಪರ್ಧೆ ಇರುತ್ತದೆ. 11ರಿಂದ 18 ವರ್ಷದ ಶಾಲಾ–ಕಾಲೇಜು ವಿದ್ಯಾರ್ಥಿಗಳು, 19 ರಿಂದ 20 ವರ್ಷದ ಯುವಕ, ಯುವತಿಯರು ಗುರಿಯಾಗಿಟ್ಟುಕೊಂಡು ಕಿರುಚಿತ್ರ ನಿರ್ಮಿಸಬಹುದು ಎಂದು ರೋಟರಿಅಧ್ಯಕ್ಷ ವಸಂತ ಹೋಬಳಿದಾರ್ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಿರುಚಿತ್ರ ಮೂರು ನಿಮಿಷ ಮೀರಿರಬಾರದು. ಕಿರುಚಿತ್ರ ತಯಾರಕರು, ನಿರ್ದೇಶಕರು, ತಂತ್ರಜ್ಞರು ಭಾಗವಹಿಸಬಹುದು. ಪ್ರಥಮ ಬಹುಮಾನ ₨ 10 ಸಾವಿರ, ದ್ವಿತೀಯ ₨ 7.5 ಸಾವಿರ, ತೃತೀಯ ₨ 5 ಸಾವಿರ ಮತ್ತು 5 ಜನರಿಗೆ ತಲಾ ₨ 2 ಸಾವಿರ ವಿಶೇಷ ಪುರಸ್ಕಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಬಹುಮಾನ ವಿತರಣಾ ಸಮಾರಂಭ ನ. 11 ರಂದು ಸಂಜೆ ಕಂಟ್ರಿಕ್ಲಬ್ ಆವರಣದಲ್ಲಿ ನಡೆಯಲಿದೆ. ಆಸಕ್ತರು ಜ್ಯುವೆಲ್ ರಾಕ್ ಹೋಟೆಲ್ ಸಮೀಪ ಇರುವ ವಸಂತ ಹೋಬಳಿದಾರ್ ಅಂಡ್ ಕೋನಲ್ಲಿ ₨ 150 ಪ್ರವೇಶ ಶುಲ್ಕ ನೀಡಿ ಅರ್ಜಿ ಪಾವತಿಸಬಹುದು ಎಂದರು.

ಬೆಳ್ಳಿ ಮಂಡಲದ ಡಿ.ಎಸ್. ಅರುಣ್ ಮಾತನಾಡಿ, ರಸ್ತೆ ಸುರಕ್ಷತೆ ಇಂದಿನ ಆದ್ಯತೆ. ಕಿರುಚಿತ್ರಗಳ ಮೂಲಕ ಹಿರಿದಾದ ಅರ್ಥ ತುಂಬಬಹುದು. ಇಲ್ಲಿ ಆಯ್ಕೆಯಾದ ಕಿರುಚಿತ್ರಗಳು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿವೆ. ಸಿನಿಮಾ ಮಂದಿರಗಳಲ್ಲೂ ಕೂಡ ಪ್ರಸಾರವಾಗಲಿವೆ ಎಂದರು.

ಕಿರುಚಿತ್ರವೂ ಈ ಹಿಂದೆ ಎಲ್ಲಿಯೂ ಪ್ರಸಾರವಾಗಿರಬಾರದು. ಹಲವು ನಿಬಂಧನೆಳು ಇರುತ್ತವೆ. ಹೆಚ್ಚಿನ ವಿವರಗಳಿಗೆ 94490 39066, 94481 05198 ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿ. ವಿಜಯಕುಮಾರ್, ರವೀಂದ್ರನಾಥ್ ಐತಾಳ್, ಧನರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.