ADVERTISEMENT

ಸಾಗರ: ಹವ್ಯಕ ಆಹಾರ ಮೇಳದಲ್ಲಿ ತರಹೇವಾರಿ ಖಾದ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 12:55 IST
Last Updated 6 ಜನವರಿ 2020, 12:55 IST
ಸಾಗರದಲ್ಲಿ ಭಾನುವಾರ ನಡೆದ ಹವ್ಯಕ ಆಹಾರ ಮೇಳದಲ್ಲಿ ಕರಿದೊಡಪೆ ತಯಾರಿಕೆಯಲ್ಲಿ ತೊಡಗಿದ್ದ ಮಹಿಳೆಯರು.
ಸಾಗರದಲ್ಲಿ ಭಾನುವಾರ ನಡೆದ ಹವ್ಯಕ ಆಹಾರ ಮೇಳದಲ್ಲಿ ಕರಿದೊಡಪೆ ತಯಾರಿಕೆಯಲ್ಲಿ ತೊಡಗಿದ್ದ ಮಹಿಳೆಯರು.   

ಸಾಗರ: ನೆಹರೂ ಮೈದಾನದಲ್ಲಿರುವ ರೋಟರಿ ಭವನದಲ್ಲಿ ಭಾನುವಾರ ತರಹೇವಾರಿ ಖಾದ್ಯಗಳು ಜನರ ಬಾಯಲ್ಲಿ ನೀರೂರಿಸಿದವು. ಇಲ್ಲಿನ ಆತ್ಮಬಂಧು ಸ್ವಸಹಾಯ ಬಂಧುಗಳ ಒಕ್ಕೂಟವು ಏರ್ಪಡಿಸಿದ್ದ ಆಹಾರ ಮೇಳದಲ್ಲಿ ಬಾಯಿ ಚಪ್ಪರಿಸುವ ರುಚಿಕರ ಖಾದ್ಯಗಳನ್ನು ತಯಾರಿಸಲಾಗಿತ್ತು.

ಕರಿದೊಡಪೆ, ಅತ್ರಾಸ, ಪತ್ರೊಡೆ, ಒತ್ತು ಶ್ಯಾವಿಗೆ, ಕಾಯಿಕಡುಬು, ನೀರು ದೋಸೆ, ಬನ್ಸ್, ಗೋಲಿಬಜೆ, ಚೀನಿಕಾಯಿ ಜಾಮೂನು, ನಿಪ್ಪಟ್ಟು, ಚಕ್ಕುಲಿ ಮಸಾಲೆ ಸೇರಿ ಹಲವು ಬಗೆಯ ಖಾದ್ಯಗಳನ್ನು ಆಹಾರ ಮೇಳಕ್ಕೆ ಬಂದವರು ಸೇವಿಸಿ ಸಂಭ್ರಮಿಸಿದರು.

ತಿನಿಸುಗಳನ್ನು ಸೇವಿಸಿದವರು ಆಯುರ್ವೇದಿಕ್ ಕಷಾಯ, ಗ್ರೀನ್ ಟೀ ಕುಡಿದು ಖುಷಿಪಟ್ಟರು.

ADVERTISEMENT

ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು ಪೂರ್ವ ಸಿದ್ಧತೆಯೊಂದಿಗೆ ತಿನಿಸುಗಳನ್ನು ತಯಾರಿಸಲು ಬೇಕಾದ ಸಾಮಗ್ರಿಗಳೊಂದಿಗೆ ಬಂದಿದ್ದರು. ಸ್ಥಳದಲ್ಲಿಯೇ ಬಿಸಿ ಬಿಸಿ ಕರಿದ ತಿಂಡಿಗಳನ್ನು ತಯಾರಿಸಿ ಕೊಡುತ್ತಿದ್ದರು.

ಆಹಾರ ಮೇಳಕ್ಕೆ ಬಂದವರು ತಮಗೆ ಇಷ್ಟವಾದ ತಿನಿಸು ಸೇವಿಸುವ ಜೊತೆಗೆ ಕಷಾಯ ಪುಡಿ, ಚಟ್ನಿಪುಡಿ, ಚಕ್ಕುಲಿ ಮೊದಲಾದ ಪ್ಯಾಕೆಟ್‌ಗಳನ್ನು ಖರೀದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.