ADVERTISEMENT

ಹೊಸನಗರ ತಾಲ್ಲೂಕಿಗೆ ಶೇ 95 ಫಲಿತಾಂಶ

24 ಪ್ರೌಢಶಾಲೆಗಳಿಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 10 ಮೇ 2024, 16:21 IST
Last Updated 10 ಮೇ 2024, 16:21 IST

ಹೊಸನಗರ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ 40 ಪ್ರೌಢಶಾಲೆಗಳಲ್ಲಿ 24 ಪ್ರೌಢಶಾಲೆಗಳು ಶೇ 100 ಫಲಿತಾಂಶ ದಾಖಲು ಮಾಡಿವೆ.

ಒಟ್ಟು 1,524 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, ಅದರಲ್ಲಿ 1,449 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 75 ವಿದ್ಯಾರ್ಥಿಗಳು ಅನುತ್ತಿರ್ಣರಾಗಿದ್ದು, ತಾಲ್ಲೂಕಿಗೆ ಶೇ 95.05 ದಾಖಲೆಯ ಫಲಿತಾಂಶ ಬಂದಿದೆ.

ಶೇ 100 ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳು: ಸರ್ಕಾರಿ ಪ್ರೌಢಶಾಲೆ ಜಯನಗರ, ಸಂಪೆಕಟ್ಟೆ, ಹೊಸನಾಡು, ಕಾನುಗೋಡು, ಮಸಗಲ್ಲಿ, ಚಿಕ್ಕಜೇನಿ, ಕಾರಣಗಿರಿ, ನಗರ, ಕೆ.ಪಿ.ಎಸ್ ಅಮೃತ, ಐಜಿಆರ್‌ಎಸ್ (ಬಿ.ಸಿ) ಗೇರುಪುರ, ಐಜಿಆರ್‌ಎಸ್ (ಎಸ್ಸಿ) ಗೇರುಪುರ, ಡಿಬಿಆರ್‌ಎಸ್ ಕೆರೆಹಳ್ಳಿ, ಅಲಗೇರಿ ಮಂಡ್ರಿ (ಅನುದಾನಿತ ಪ್ರೌಢಶಾಲೆ).

ADVERTISEMENT

ಶೇ 100 ಫಲಿತಾಂಶ ಪಡೆದ ಖಾಸಗಿ ಶಾಲೆಗಳು: ರಾಮಕೃಷ್ಣ ಪ್ರೌಢಶಾಲೆ ರಿಪ್ಪನ್‌ಪೇಟೆ, ಪ್ರಜ್ಞಾಭಾರತಿ ನಿಟ್ಟೂರು, ರಾಮಕೃಷ್ಣ ಪ್ರೌಢಶಾಲೆ ಬಟ್ಟೆಟಮಲ್ಲಪ್ಪ, ರಾಮಕೃಷ್ಣ ವಿದ್ಯಾಲಯ ಹೊಸನಗರ, ಗುರೂಜಿ ಇಂಟರನ್ಯಾಷನಲ್ ಹೊಸನಗರ, ಅಮೃತ ವಿದ್ಯಾಲಯ ನಗರ, ಶಾರದ ಆಂಗ್ಲ ಪ್ರೌಢಶಾಲೆ ರಿಪ್ಪನ್‌ಪೇಟೆ, ಹೋಲಿರೆಡಿಮರ್ ಹೊಸನಗರ, ಕುವೆಂಪು ಪ್ರೌಢಶಾಲೆ ಹೊಸನಗರ, ಮೇರಿಮಾತಾ ಪ್ರೌಢಶಾಲೆ ರಿಪ್ಪನ್‌ಪೇಟೆ.

ಉತ್ತಮ ಫತಾಂಶ ಪಡೆದ ಶಾಲೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಾಣಾಧಿಕಾರಿ ಎಚ್.ಆರ್. ಕೃಷಮೂರ್ತಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.