ಶಿವಮೊಗ್ಗ: ಚಾಲನಾ ಪರವಾನಗಿ ಇಲ್ಲದೇ ಬಾಲಕ ಬೈಕ್ ಚಾಲನೆ ಮಾಡಿದ್ದು, ಆತನ ತಂದೆಗೆ ತೀರ್ಥಹಳ್ಳಿಯ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದೆ.
ತೀರ್ಥಹಳ್ಳಿ ಠಾಣೆ ಪಿಎಸ್ ಐ ಶಿವನಗೌಡ ಅವರು ಜೂನ್ 19ರಂದು ಅಲ್ಲಿನ ದೊಡ್ಮನೆ ಕೇರಿಯ* ಹತ್ತಿರ ವಾಹನ ತಪಾಸಣೆ ಮಾಡುವಾಗ 17 ವರ್ಷದ ಬಾಲಕ ಚಾಲನಾ ಪರವಾನಿಗೆ ಇಲ್ಲದೇ ಬೈಕ್ ಚಲಾಯಿಸಿಕೊಂಡು ಬಂದು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ.
ಬಾಲಕನಿಗೆ ಬೈಕ್ ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಆತನ ತಂದೆ, ದೊಡ್ಮನೆ ಕೇರಿ ನಿವಾಸಿ ಮೊಹಮ್ಮದ್ ಹಯಾನ್ (42) ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಬಾಲಕನ ತಂದೆ ಮೊಹಮ್ಮದ್ ಹಯಾನ್ ಅವರಿಗೆ ₹25,000 ದಂಡ ವಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.